ಕಡಬ ತಾಲೂಕು ವತಿಯಿಂದ ಎಸ್ಡಿಪಿಐ ಸಂಸ್ಥಾಪನಾ ದಿನಾಚರಣೆ

(ನ್ಯೂಸ್ ಕಡಬ)newskadaba.com ಕಡಬ, ಜೂ.21, ಕಡಬ ತಾಲೂಕು ವತಿಯಿಂದ ಇಂದು ಎಸ್ಡಿಪಿಐ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ
ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಧ್ವಜಾರೋಹಣವನ್ನು ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಆನಂದ ಮಿತ್ತಬೈಲು ನೆರವೇರಿಸಿ ಹಿತವಚನ ನುಡಿದರು. ಎಸ್ಡಿಪಿಐ ಕಡಬ ತಾಲೂಕು ಅಧ್ಯಕ್ಷರಾದ ರಮ್ಲ ಸನ್ ರೈಸ್ ರವರು ಸಂದೇಶ ಭಾಷಣವನ್ನು ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಉಪಾದ್ಯಕ್ಷರಾದ ನೌಷಾದ್ ಕಡಬ, ಕೋಶಾಧಿಕಾರಿ ಹಾರಿಸ್ ಕಳಾರ, ಕಮರುದ್ದೀನ್ ಅಲೆಕ್ಕಾಡಿ, ನಬಿ ಕಡಬ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಅದೇ ರೀತಿ ದೇಶದ ಗಡಿಯಲ್ಲಿ ಹುತಾತ್ಮರಾಗಿರುವ ನಮ್ಮ ಯೋಧರಿಗೆ ಮೌನ ಪ್ರಾರ್ಥನೆಯೊಂದಿಗೆ ಗೌರವವನ್ನು ಕೂಡ ಸಲ್ಲಿಸಲಾಯಿತು. ಜೊತೆಗೆ ಎಸ್ಡಿಪಿಐ ಪಕ್ಷಕ್ಕೆ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು 12 ಮಂದಿ ಸೇರ್ಪಡೆಗೊಂಡರು.ಕಾರ್ಯಕ್ರಮವನ್ನು ನೌಷಾದ್ ಕಡಬರವರು ನಿರೂಪಿಸಿ ಧನ್ಯವಾದಗೈದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿಗಳನ್ನು ಹಂಚಲಾಯಿತು.

Also Read  ಚರ್ಚ್ ದಾಳಿ ಎಂಬ ಸುಳ್ಳು ಸುದ್ದಿಯನ್ನು ಹರಡಿದ ಆರೋಪ ► ಇಬ್ಬರ ಬಂಧನ

error: Content is protected !!
Scroll to Top