ಆಲಂಕಾರಿನಲ್ಲಿ ರತ್ನಶ್ರೀ ಸಂಸ್ಥೆಯಿಂದ ನೂತನ ಪೆಟ್ರೋಲ್ ಬಂಕ್ ➤ ಎಂಆರ್‌ಪಿಎಲ್‌ನ ರಿಟೈಲ್ ಔಟ್‌ಲೆಟ್‌ಗೆ ಭೂಮಿಪೂಜೆ

(ನ್ಯೂಸ್ ಕಡಬ)newskadaba.com ಅಲಂಕಾರು, ಜೂ. 21, ಎಂಆರ್‌ಪಿಎಲ್‌ನ ರಿಟೈಲ್ ಔಟ್‌ಲೆಟ್‌ಗೆ ಆಲಂಕಾರಿನಲ್ಲಿ ಜೂ.20ರಂದು ಬೆಳಿಗ್ಗೆ ಭೂಮಿಪೂಜೆ ನೆರವೇರಿಸಲಾಯಿತು.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಕೃಷ್ಣಮೂರ್ತಿ ಕಲ್ಲೇರಿಯವರು ಶಿಲಾನ್ಯಾಸ ನೆರವೇರಿಸಿ, ಪುರೋಹಿತರಾದ ಶ್ರೀಕಾಂತ ಕಲ್ಲೂರಾಯ ಬಾಜಳ್ಳಿಯವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ವಿದ್ಯಾರಣ್ಯ ಕಲ್ಲೇರಿ, ಪೆರಾಬೆ ಗ್ರಾ.ಪಂ. ಅಧ್ಯಕ್ಷೆ ಸುಗುಣ, ಕಡಬ ಸಿ.ಎ ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ, ಆಲಂಕಾರು ಗ್ರಾ.ಪಂ. ಸದಸ್ಯ ಕೇಶವ ಗೌಡ ಆಲಡ್ಕ, ಉಪ್ಪಿನಂಗಡಿ ರಾಜ್ ಬೋರ್‌ವೆಲ್ಸ್‌ನ ಕೃಷ್ಣರಾಜ್, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ಗೌಡ, ಆಲಂಕಾರು ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಪುರಂದರ ಗೌಡ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗುರುಪ್ರಸಾದ್ ರಾಮಕುಂಜ, ಪ್ರಮುಖರಾದ ಮಹೇಂದ್ರ ವರ್ಮ ಮೇಲೂರು, ಅಜಿತ್ ಶೆಟ್ಟಿ ಕಡಬ, ಗೋಪಾಲಕೃಷ್ಣ ಭಟ್ ಬಚ್ಚಿನಡ್ಕ, ಫೀರ್ ಮಹಮ್ಮದ್ ಆಲಂಕಾರು, ಲಕ್ಷ್ಮೀನಾರಾಯಣ ರಾವ್ ಆತೂರು, ಪೂವಪ್ಪ ನಾಯ್ಕ್ ಆಲಂಕಾರು, ಗಣೇಶ್ ರೈ ಆಲಂಕಾರು, ಚಂದ್ರಶೇಖರ್ ರೈ ಆಲಂಕಾರು, ಪದ್ಮನಾಭ ಭಂಡಾರಿ ಆಲಂಕಾರು, ದೇವರಾಯ ಪ್ರಭು ಆಲಂಕಾರು, ಗೋಪಾಲ ದಡ್ಡು, ನಾರಾಯಣ ಪೂಜಾರಿ ನೀರಕಟ್ಟೆ, ಆಲಂಕಾರಿನ ರಿಕ್ಷಾ ಚಾಲಕರು ಹಾಗೂ ಇತರರು ಉಪಸ್ಥಿತರಿದ್ದರು. ಮಾಲಕ ರಾಧಾಕೃಷ್ಣ ಕೆ.ಎಸ್. ’ರತ್ನಶ್ರೀ’ಯವರು ಸ್ವಾಗತಿಸಿದರು.

Also Read  ಫೆ. 07 ರಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರ ಜಿಲ್ಲಾ ಪ್ರವಾಸ

error: Content is protected !!
Scroll to Top