ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ ಬಾಲಕನಿಗೆ ಕೊರೊನಾ

(ನ್ಯೂಸ್ ಕಡಬ) newskadaba.com.ಬೆಳಗಾವಿ,ಜೂ.21:ಜೂನ್ 25 ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ 16 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಕಲಬಾಂವಿಯಲ್ಲಿ ನಡೆದಿದೆ.


ಈ ಬಾಲಕ ಹೊರರಾಜ್ಯದ ಹಿನ್ನೆಲೆ ಹೊಂದಿದ್ದರಿಂದ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಕಲಬಾಂವಿಯಲ್ಲಿ ಮುಂಬರಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿತ್ತು ಆದರೆ ಈಗ ಆತನಿಗೆ ಸೋಂಕು ತಗುಲಿರುವುದರಿಂದ ಪರೀಕ್ಷೆ ಎದುರಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ.


ಬಾಲಕ ಈ ಹಿಂದೆ ಚೆನ್ನೈನಲ್ಲಿರುವ ಆತನ ಅಕ್ಕನ ಮನೆಗೆ ಹೋಗಿ ಬಂದಿದ್ದ ಎನ್ನಲಾಗಿದೆ. ಜೂ.1 ರಂದು ಈತ ಕಲಬಾಂವಿ ಗ್ರಾಮಕ್ಕೆ ಆಗಮಿಸಿದ್ದ ಎಂಬ ಮಾಹಿತಿ ದೊರೆತಿದೆ. ಹೀಗಾಗಿ ಈ ವಿಚಾರ ತಾಲೂಕಾಡಳಿತಕ್ಕೂ ತಿಳಿದಿದ್ದರಿಂದ ಅಧಿಕಾರಿಗಳು ವಿಚಾರಣೆ ನಡೆಸಿ ಬಾಲಕನನ್ನು ಹೋ ಕ್ವಾರಂಟೈನ್‍ನಲ್ಲಿ ಇರಿಸಿದ್ದಾರು. ನಂತರ ಅಧಿಕಾರಿಗಳು ಜೂ.16ಕ್ಕೆ ಯುವಕನ ಗಂಟಲು ದ್ರವ ಪರೀಕ್ಷೆ ಕಳುಹಿಸಿದ್ದರು. ಈಗ ಕೊರೊನಾ ಸೋಂಕು ದೃಢವಾಗಿದೆ. ಬಾಲಕನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Also Read  ಮಂಗಳೂರು: ಟ್ರಕ್ ಹಾಗೂ ಬೈಕ್ ನಡುವೆ ಅಪಘಾತ ➤ ಸಹ ಸವಾರೆ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top