ಕಡಬದ ಸಿ.ಎ. ಬ್ಯಾಂಕ್ ಪ್ರದೇಶದಲ್ಲಿ ಸ್ಯಾನಿಟೈಸ್

(ನ್ಯೂಸ್ ಕಡಬ)newskadaba.com ಕಡಬ, ಜೂ. 20, ಸೀಲ್‌ಡೌನ್ ಮಾಡಲಾಗಿರುವ ಕಡಬದ ಸಿ.ಎ.ಬ್ಯಾಂಕ್ ಹಾಗೂ ಸುತ್ತಲಿನ ಪ್ರದೇಶವನ್ನು ಶನಿವಾರದಂದು ಅಧಿಕಾರಿಗಳ ಸಮ್ಮುಖದಲ್ಲಿ ಸ್ಯಾನಿಟೈಸ್ ಮಾಡಲಾಯಿತು.

ಕಡಬದ ಸಿ.ಎ. ಬ್ಯಾಂಕ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಸಿ.ಎ. ಬ್ಯಾಂಕ್ ಹಾಗೂ ಪರಿಸರದ 100 ಮೀಟರ್ ಪ್ರದೇಶವನ್ನು 15 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿತ್ತು. ಆದರೆ ಇದೀಗ ಎರಡನೇ ವರದಿಯು ನೆಗೆಟಿವ್ ಬಂದಿದ್ದು, ಬ್ಯಾಂಕ್ ಪರಿಸರವನ್ನು ಸೀಲ್ ಡೌನ್ ಮುಕ್ತಗೊಳಿಸುವ ಉದ್ದೇಶದಿಂದ ಅಧಿಕಾರಿಗಳು ಈ ಕಾರ್ಯವನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಉಪಸ್ಥಿತರಿದ್ದರು.

Also Read  ಉಳ್ಳಾಲ: ಮಲತಂದೆಯಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ➤ ಆರೋಪಿ ವಶಕ್ಕೆ

error: Content is protected !!
Scroll to Top