15 ವರ್ಷದ ಬಾಲಕ ನೇತ್ರಾವತಿ ನದಿಯಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 20, ಬಾಲಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೋಳಿಯಾರು ಗ್ರಾಮದ ಧರ್ಮನಗರ ಸಮೀಪ ಜಲಕದಕಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಕೊಣಾಜೆ ಸಮೀಪದ ನಡುಪದವು ನಿವಾಸಿ ಫಾಝಿಲ್(15) ಎಂದು ಗುರುತಿಸಲಾಗಿದೆ.
ಈತ ಸ್ನೇಹಿತರ ಜೊತೆಗೆ ಇಲ್ಲಿನ ತೋಟವೊಂದರ ಕೆಲಸಕ್ಕೆ ತೆರಳಿದ್ದು, ತೋಟದಲ್ಲಿ ತೆಂಗಿನಕಾಯಿ ಹೆಕ್ಕಿದ ಬಳಿಕ ಕೈಕಾಲು ತೊಳೆಯಲೆಂದು ತೋಟದ ಪಕ್ಕದಲ್ಲೇ ಹರಿಯುವ ನದಿ ಕಿನಾರೆಯ ಬಳಿ ಮುಂದಾದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

Also Read  ಎಸ್ಡಿಪಿಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಆಯುಷ್ಮಾನ್ ಭಾರತ್ ಕಾರ್ಡ್ ಅಭಿಯಾನ

 

error: Content is protected !!
Scroll to Top