ಇಲಾಖಾ ಪರೀಕ್ಷೆ – ಸರಕಾರಿ ನೌಕರರಿಗೆ ತರಬೇತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 20, ಕರ್ನಾಟಕ ಲೋಕಸೇವಾ ಆಯೋಗದ 2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳು ಜುಲೈ 2020 ರಲ್ಲಿ ಜರಗಲಿದ್ದು, ಈ ಪರೀಕ್ಷೆಗಳಿಗೆ ಹಾಜರಾಗುವ ಸರಕಾರಿ ನೌಕರರಿಗೆ ತರಬೇತಿ ತರಗತಿಗಳು ಜುಲೈ 3 ರಿಂದ ಹಂಪನಕಟ್ಟೆಯಲ್ಲಿರುವ ಸರಕಾರಿ ನೌಕರರ ಸಭಾಭವನದಲ್ಲಿ ಪ್ರಾರಂಭವಾಗಲಿದೆ.

ಪ್ರತಿದಿನ ಸಂಜೆ 6 ಗಂಟೆಗೆ ತರಗತಿಗಳು ಪ್ರಾರಂಭವಾಗಲಿದ್ದು, ಆಸಕ್ತ ಸರಕಾರಿ ನೌಕರರು ತರಬೇತಿಯ ಸದುಪಯೋಗವನ್ನು ಪಡೆಯಬಹುದು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ.ಕೃಷ್ಣ ತಿಳಿಸಿದ್ದಾರೆ.

Also Read  ಎಸ್ಕೆಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ- ಸುಳ್ಯ ವಲಯ ಮಟ್ಟದ ಉದ್ಘಾಟನೆ

error: Content is protected !!
Scroll to Top