ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 20, ಪ್ರತಿ ವರ್ಷದಂತೆ ಈ ವರ್ಷವೂ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿರುತ್ತದೆ.

ಪ್ರಸ್ತುತ ಸಾಲಿನಲ್ಲಿ ಕೊರೋನಾ ಮಹಾಮಾರಿ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭಗಳು, ಮತ್ತಿತರ ಕಾರ್ಯಕ್ರಮಗಳು ಆಯೋಜಿಸುವುದನ್ನು ನಿಷೇದಿಸಿರುವುದರಿಂದ ಈ ಸಾಲಿನಲ್ಲಿ “ಮನೆಯಲ್ಲಿಯೇ ಯೋಗ- ಕುಟುಂಬದೊಂದಿಗೆ ಯೋಗ” ಎಂಬ ಘೋಷ ವಾಕ್ಯದೊಂದಿಗೆ ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯೋಗ ದಿನಾಚರಣೆಯನ್ನು ಆಚರಿಸಲು ಭಾರತ ಸರ್ಕಾರದ ಆಯುಷ್ ಸಚಿವಾಲಯವು ಸೂಚಿಸಿದೆ. ಆದುದರಿಂದ ಜೂನ್ 21 ರಂದು ಆಯುಷ್ ಸಚಿವರು ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪ್ರಧಾನ ಮಂತ್ರಿಗಳು ವಿಡಿಯೋ ಸಂದೇಶವನ್ನು ಜನತೆಗೆ ನೀಡಲಿರುವರು. ನಂತರ ಯೋಗ ತಜ್ಞರುಗಳಿಂದ ಯೋಗಾಸನಗಳ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುವುದು. ದೂರದರ್ಶನದ ಎಲ್ಲಾ ಚಾನೆಲ್‍ಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದ್ದು, ಯೋಗ ಪ್ರಾತ್ಯಕ್ಷಿಕೆಗಳನ್ನು ನೋಡಿಕೊಂಡು ಸಾರ್ವಜನಿಕರು ಮನೆಯಲ್ಲಿಯೇ ಕುಟುಂಬದೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಬೇಕೆಂದು ದ.ಕ. ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ವಿವಾದಿತ ಫೇಸ್‌ಬುಕ್‌ ಪೋಸ್ಟ್ ➤ ಸೌದಿಯ ಜೈಲಿನಲ್ಲಿದ್ದ ಮಂಗಳೂರಿನ ಹರೀಶ್ ಬಂಗೇರ ಬಿಡುಗಡೆ

error: Content is protected !!
Scroll to Top