ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ತಾಲೂಕು ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 20, ದಕ್ಷಿಣ ಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಜೂನ್ 22, 23 ಮತ್ತು 24 ರಂದು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ.

ದೂರುಗಳನ್ನು ಸ್ವೀಕರಿಸುವ ಸ್ಥಳ ಮತ್ತು ದಿನಾಂಕ ಹೀಗಿವೆ: ಬೆಳ್ತಂಗಡಿ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 22 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆ, ಬಂಟ್ವಾಳ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 22ರಂದು ಮಧ್ಯಾಹ್ನ 2.30 ಗಂಟೆಯಿಂದ ಸಂಜೆ 4.30 ಗಂಟೆ, ಸುಳ್ಯ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 23 ರಂದು ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 1 ಗಂಟೆ, ಪುತ್ತೂರು ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 23 ರಂದು ಮದ್ಯಾಹ್ನ 2.30 ಗಂಟೆಯಿಂದ ಸಂಜೆ 4.30 ಗಂಟೆ, ಮೂಡಬಿದ್ರೆ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 24 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಂದ ದೂರು ಸ್ವೀಕರಿಸುವರು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2483000 ಸಂಪರ್ಕಿಸಲು ಮಂಗಳೂರು ಎ.ಸಿ.ಬಿ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Also Read  ಮರ್ಧಾಳ ನೆಕ್ಕಿತ್ತಡ್ಕ ಮಖಾಂ ಉರೂಸ್ ಗೆ ಚಾಲನೆ ➤ ಇಂದಿನಿಂದ ಮಾರ್ಚ್ 02ರ ವರೆಗೆ ಉರೂಸ್ ಸಮಾರಂಭ

error: Content is protected !!
Scroll to Top