ಕರಾವಳಿ ಜಿಲ್ಲೆಯ ನಗರಾಭಿವೃದ್ದಿ ಕಟ್ಟಡಗಳ ಸಕ್ರಮ

ಕರಾವಳಿ ಜಿಲ್ಲೆಯ ನಗರಾಭಿವೃದ್ಧಿ ಸಂಸ್ಥೆಗಳ ಕಟ್ಟಡಗಳ ಸಕ್ರಮಗೊಳಿಸುವಿಕೆ ಒಂದು ತಿಂಗಳೊಳಗೆ ಎಂದು ಶ್ರೀ ಭೈರತಿ ಬಸವರಾಜ್ ರವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಾಜ್ಯಾದ್ಯಂತ ಪೌರಾಡಳಿತ/ ನಗರಾಭಿವೃದ್ಧಿ ಸಂಸ್ಥೆಗಳಲ್ಲಿ ಸ್ವಂತ ನಿವೇಶನದಲ್ಲಿ ಕಟ್ಟಲಾಗಿರುವ ಕಟ್ಟಡದ ಸಕ್ರಮಗೊಳಿಸುವಿಕೆಯನ್ನು ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ನಿವಾರಿಸುವಂತೆ -ಮಾನ್ಯ ನಗಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ್ ರವರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ರವರ ನಿಯೋಗವು ಮಾನ್ಯ ನಗರಾಭಿವೃದ್ಧಿ ಸಚಿವರೊಂದಿಗೆ ವಿಧಾನ ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆ ನಡೆಸಿ ಜಿಲ್ಲೆಯಲ್ಲಿನ ಏಕ ನಿವೇಶನ ನೊಂದಣಿ, ಕಟ್ಟಡ ಪರವಾನಿಗೆ, ಕನ್ವರ್ಷನ್, ಇ-ಖಾತಾ, ಖಾತಾ ಬದಲಾವಣೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸಿ ಹಲವಾರು ವರ್ಷಗಳಿಂದ ಇರುವ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿಗಧಿಪಡಿಸಲಾಗಿರುವ ಅಭಿವೃದ್ಧಿ ಶುಲ್ಕ ಕುರಿತು ಸಮಗ್ರವಾಗಿ ಚರ್ಚಿಸಿದ – ಈ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸುವಂತೆ ತಿಳಿಸಿದರು. ನೆನೆಗುದಿಗೆ ಬಿದ್ದಿರುವ ನಗರ/ ಪುರಸಭೆಯ ಮಾಸ್ಟರ್ ಪ್ಲಾನ್ ಯೋಜನೆಯನ್ನು ಕೂಡಲೇ ತಯಾರಿಸಲು ಆದೇಶ ನೀಡಿದರಲ್ಲದೆ, ಮಾಸ್ಟರ್ ಪ್ಲಾನ್ ತಯಾರಿಸುವವರೆಗೆ ತಡೆಹಿಡಿದಿರುವ ಭೂ-ಪರಿವರ್ತನೆಯ ವ್ಯವಸ್ಥೆಯನ್ನು ಮರಳಿ ಜಾರಿಗೆ ಬರುವಂತೆ ಸಭೆಯಲ್ಲಿ ತಿಳಿಸಿದರು.

Also Read  ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ   ದೂರು ದಾಖಲು               

ಸುಧೀರ್ಘವಾಗಿ 3 ಗಂಟೆಗಳ ಕಾಲ ಶ್ರೀ ಬಿ.ಎ.ಬಸವರಾಜ್, ಮಾನ್ಯ ನಗರಾಭಿವೃದ್ಧಿ ಸಚಿವರು, ಶ್ರೀ ಕೆ.ಸಿ.ನಾರಾಯಣಗೌಡ, ಮಾನ್ಯ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು, ಶ್ರೀ ಸಿ.ಟಿ.ರವಿ, ಮಾನ್ಯ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕøತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಮುಂತಾದವರು ಅನೇಕ ವಿಚಾರಗಳ ಬಗ್ಗೆ ಮಾಹಿತಿ ಪಡೆದು ಚರ್ಚಿಸಿದರು. ಸದರಿ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳಾದ, ಶ್ರೀ ರಾಜೇಶ್ ನಾಯ್ಕ್. ಯು, ಶ್ರೀ ಉಮಾನಾಥ್ ಎ. ಕೋಟ್ಯಾನ್, ಶ್ರೀ ಸಂಜೀವ ಮಠಂದೂರು, ಶ್ರೀ ಅಂಗಾರ ಎಸ್, ಶ್ರೀ ಡಿ. ವೇದವ್ಯಾಸ ಕಾಮತ್, ಡಾ|| ಭರತ್‍ಶೆಟ್ಟಿ, ಶ್ರೀ ಹರೀಶ ಪೂಂಜಾ ಮುಂತಾದವರು ಹಾಜರಿದ್ದರು. ಹಾಗೂ ಶ್ರೀ ರಾಕೇಶ್ ಸಿಂಗ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಶ್ರೀ ವಿ.ಪೊನ್ನು ರಾಜ್, ವ್ಯವಸ್ಥಾಪಕ ನಿರ್ದೇಶಕರು, ಕೆ.ಪಿ.ಸಿ.ಎಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳು, ಶ್ರೀ ಶಶಿಧರ್, ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಶ್ರೀ ಎ.ಆರ್.ರವಿ, ಸನ್ಮಾನ್ಯ ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿಗಳು ಹಾಜರಿದ್ದರು.

Also Read  ವಾರುಸುಧಾರನ ಜನನ ► 83ನೇ ವಯಸ್ಸಿನಲ್ಲಿ ಗಂಡು ಮಗುವಿನ ತಂದೆಯಾದ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ..!!!

error: Content is protected !!
Scroll to Top