ಮುಖಗವಚ ಧರಿಸುವುದರಿಂದ ಕೊರೋನಾ ತಡೆಗಟ್ಟಬಹುದು ➤ ಡಾ. ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ)newskadaba.com ಮಾಸ್ಕ್ ಡೇ ದಿನಾಚರಣೆ ಅಂಗವಾಗಿ ಪೌರ ರಕ್ಷಣಾ ಪಡೆಯಿಂದ ಕುಲಶೇಕರ ಹಾಗೂ ಶಕ್ತಿನಗರ ಕ್ರಾಸ್ ರಿಕ್ಷಾ ಸ್ಟ್ಯಾಂಡ್ ಆಟೋ ಚಾಲಕರಿಗೆ ಮೌತ್ ಮಾಸ್ಕ್ ಹಾಗೂ ಸ್ಯಾನಿಟೈಸರ್‍ ಗಳನ್ನು ನೀಡಲಾಯಿತು. ಮೌತ್ ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳನ್ನು ವಿತರಿಸಿದ ಬಳಿಕ ಪೌರರಕ್ಷಣಾ ಪಡೆಯ ಚೀಫ್ ವಾರ್ಡನ್ ಡಾ: ಮುರಲೀ ಮೋಹನ್ ಚೂಂತಾರು ಮಾತನಾಡಿ ಮುಖಕವಚ ಧರಿಸುವುದರಿಂದ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಎಲ್ಲರೂ ಮುಖಕವಚ ಧರಿಸುವುದರಿಂದ ರೋಗವನ್ನು ತಡೆಗಟ್ಟವುದು ಸಾಧ್ಯವಿದೆ ಎಂದು ನುಡಿದರು.

ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ವಿಷ್ಣುಮೂರ್ತಿ ಭಟ್ ಹಾಗೂ ಉಪಾಧ್ಯಕ್ಷರಾದ ಆಲ್ಫಾನ್ಸ್ ಡಿಸೋಜಾ ಉಪಸ್ಥಿತರಿದ್ದರು. ಪೌರರಕ್ಷಣಾ ಪಡೆಯ ನಿತಿನ್, ಅಂಜನ್ ಹಾಗೂ ಗೃಹರಕ್ಷಕರಾದ ಸುನೀಲ್ ದಿವಾಕರ್, ಮಹೇಶ್, ಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು. 50 ರಿಕ್ಷಾ ಚಾಲಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳನ್ನು ನೀಡಲಾಯಿತು.

Also Read  ಉಡುಪಿ: ಸಾರ್ವಜನಿಕ ಸ್ಥಳದಲ್ಲೇ ಗಾಂಜಾ ಸೇವನೆ..!   ➤ ಐವರು ವಿದ್ಯಾರ್ಥಿಗಳು ಅರೆಸ್ಟ್

error: Content is protected !!
Scroll to Top