ಆತೂರು: ತಹ್ಲೀಲ್ ಸಮರ್ಪಣೆ, ಸನ್ಮಾನ ಕಾರ್ಯಕ್ರಮ ಹಾಗೂ ಪ್ರಮಾಣ ಪತ್ರ ವಿತರಣೆ

(ನ್ಯೂಸ್ ಕಡಬ)newskadaba.com ಆತೂರು, ಜೂ.20, ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯದಿಂದ ಆತೂರು ಕ್ಲಸ್ಟರ್ ಸಮಿತಿಯ ಸಂದರ್ಶನ ಸಭೆ, ಕೊರೋನಾ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕಾರ್ಯಕರ್ತರು ಮೆಡಿಚೈನ್ ಮಾಡಿದ ಸ್ವಯಂ ಸೇವಕರಿಗೆ ಸನ್ಮಾನ ಹಾಗು ಪ್ರಮಾಣ ಪತ್ರ ವಿತರಣೆ ಮತ್ತು ಇತ್ತೀಚಿಗೆ ನಿಧನ ಹೊಂದಿರುವ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಖಜಾಂಜಿ
ಆಗಿದ್ದ ಸ್ವಾದಿಕ್ ಮುಸ್ಲಿಯಾರ್, ಎಸ್ ವೈ ಎಸ್ ನ ಮೆಟ್ರೋ ಮೊಹಮ್ಮದ್ ಹಾಜಿ ಮತ್ತು ವಿಖಾಯ ಕಾರ್ಯಕರ್ತ ಮುಬಾರಕ್ ಇವರ ಮೇಲೆ ತಹಲೀಲ್ ಸಮರ್ಪಣೆ ಕಾರ್ಯಕ್ರಮವು ದಿನಾಂಕ 19 ಶುಕ್ರವಾರ ಮದ್ಯಾಹ್ನ ಬದ್ರಿಯಾ ಹಾಲ್ ನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಹಂಝ ಸಖಾಫಿ ಉಸ್ತಾದ್ ದುಆ ಹಾಗು ಪ್ರಾಸ್ತಾವಿಕ ಮಾತನಾಡಿದರು. ಅಬ್ದುಲ್ ರಝಕ್ ದಾರಿಮಿ ಹಳೆನೇರಂಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಅಧ್ಯಕ್ಷರಾದ ಉಸ್ತಾದ್ ಅಶ್ರಫ್ ಫಾಝಿಲ್ ಬಾಖವಿ ಹಿತ ನುಡಿದರು. ವಲಯ ಕಾರ್ಯದರ್ಶಿ ಹಾರೀಸ್ ಕೌಸರಿ ಉಸ್ತಾದ್ ವಿಖಾಯಾದ ಮೆಡಿಚೈನ್ ನ ಕುರಿತು ಮಾತನಾಡಿದರು. ಕ್ಲಸ್ಟರ್ ಅಧ್ಯಕ್ಷರಾದ ಸಿದ್ದೀಕ್ ನೀರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಶೀರ್ ಮುಸ್ಲಿಯಾರ್, ರಝಾಕ್ ಹಾಜಿ ಕುಂಡಾಜೆ, ಅಶ್ರಫ್ ಕೋರೆಪದವು ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ವಾಣಿ ಕಾಲೇಜು ವಿದ್ಯಾರ್ಥಿಯ ಡಿಬಾರ್ ಪ್ರಕರಣ ➤ ಸಂಘಟನೆ ಹೆಸರು ದುರ್ಬಳಕೆ ಮಾಡಿದ ಪ್ರಾಂಶುಪಾಲರ ನಡೆಗೆ ಪಾಪ್ಯುಲರ್ ಫ್ರಂಟ್ ಖಂಡನೆ ➤➤ ದೂರು ದಾಖಲಿಸಲು ನಿರ್ಧಾರ

ಎಸ್ಕೆಎಸ್ಸೆಸ್ಸೆಫ್ ವಿಖಾಯ ಮೆಡಿಚೈನ್ ಸ್ವಯಂ ಸೇವಕರಾಗಿ ವಹಿಸಿದ ಸಿದ್ದೀಕ್ ನೀರಾಜೆ, ಝಕರಿಯಾ ಮುಸ್ಲಿಯಾರ್ ಆತೂರು, ಮೊಹಮ್ಮದ್ ಕುಂಡಾಜೆ ಹಾಗು ಅಬೂಬಕ್ಕರ್ ಸಿದ್ದೀಕ್, ಮುನೀರ್ ಆತೂರು ಇವರಿಗೆ ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನೀಡಿದ ಪ್ರಮಾಣ ಪತ್ರ ವಿತರಣೆ ಹಾಗು ಕ್ಲಸ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ರಾಝಿಕ್ ಆತೂರುಬೈಲ್ ಸ್ವಾಗತ ಮಾಡಿದರು. ಝಕಾರಿಯಾ ಮುಸ್ಲಿಯಾರ್ ವಂದಿಸಿ ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದರು.

Also Read  "ಝೀರೋ ಡ್ರಾಪ್ ಔಟ್" ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ತಾಲೂಕು ಶಿಕ್ಷಣಾಧಿಕಾರಿಯ ಭೇಟಿ

error: Content is protected !!
Scroll to Top