ಏರ್ ಲಿಫ್ಟ್ ಮೂಲಕ ಕತಾರ್ ನಿಂದ ಮಂಗಳೂರಿಗೆ ಬಂದಿಳಿದ 185 ಕನ್ನಡಿಗರು

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.20:ಕತಾರ್ ನ ದೋಹಾದಿಂದ 185 ಪ್ರಯಾಣಿಕರನ್ನು ವಂದೇ ಭಾರತ್ ಮಿಷನ್‍ನಡಿ ಏರ್ಲಿಫ್ಟ್ ಮೂಲಕ ಸುರಕ್ಷಿತವಾಗಿ ಮಂಗಳೂರಿಗೆ ಕರೆತರಲಾಯಿತು.


ಹಮಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಯನ್ ಏರ್‍ಲೈನ್ಸ್ ವಿಮಾನದಲ್ಲಿ 185 ಪ್ರಯಾಣಿಕರು ಬಂದಿಳಿದರು. ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರು ಮಾಸ್ಕ್, ಗ್ಲೌಸ್,ಫೇಸ್ ಕವರ್‍ಗಳನ್ನು ಧರಿಸಿದ್ದರು. ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸಲು ಕತಾರ್ ಭಾರತೀಯ ಸಮುದಾಯ ಹಿತೈಷಿ ವೇದಿಕೆ ಮತ್ತು ಕತಾರ್‍ನ ಭಾರತೀಯ ರಾಯಭಾರಿ ಕಛೇರಿಯು ಪ್ರಮುಖ ಪಾತ್ರ ವಹಿಸಿದೆ.ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಬರಲು ಸಹಕರಿಸಿದ ಎಲ್ಲಾರಿಗೂ ಧನ್ಯವಾದವನ್ನು ಸಲ್ಲಿಸುತ್ತಿದ್ದೇವೆ ಎಂದು ಪ್ರಯಾಣಿಕರು ತಿಳಿಸಿದರು.

Also Read  ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಹುದ್ದೆಗೆ ಝಹೀರ್ ಖಾನ್ ನೇಮಕ

error: Content is protected !!
Scroll to Top