ಕಡಬ: ಬೈಕ್ ಗಳ ನಡುವೆ ಢಿಕ್ಕಿ ➤ ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜೂ.19. ಬೈಕ್ ಗಳೆರಡರ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೆರಾಬೆ ಎಂಬಲ್ಲಿ ನಡೆದಿದೆ.

ಗಾಯಾಳು ಸವಾರರನ್ನು ಕುಂತೂರು ಕೋಚಕಟ್ಟೆ ನಿವಾಸಿ ಸದಾನಂದ ಹಾಗೂ ಕಡಬ ತಾಲೂಕು ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಸುರೇಶ್ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಅಲಂಕಾರಿನ 108 ಆಂಬ್ಯುಲೆನ್ಸ್ ನ ಇಎಂಟಿ ಚಂದ್ರಶೇಖರ್ ಹಾಗೂ ಪೈಲೆಟ್ ಶಿವಶರಣು ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Also Read  ಪುತ್ತೂರು: ಅಡಿಕೆ ಕಳ್ಳತನ ಪ್ರಕರಣ - ಇಬ್ಬರು ಆರೋಪಿಗಳ ಬಂಧನ

error: Content is protected !!
Scroll to Top