ನಾಳೆ (ಜೂ.20) ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.19, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ (ನಿ) ಇದರ ವತಿಯಿಂದ ಬೃಹತ್ ವಿದ್ಯುತ್ ಕಾಮಗಾರಿ ಕಬಕ ವಿಭಾಗದ ರೈಲ್ವೆ ಕ್ರಾಸಿಂಗ್ ಬಳಿ 110ಕೆವಿ ದ್ವಿಮಾರ್ಗದ ಹಾಲಿ ಇರುವ ತಂತಿಯ ಬದಲಾವಣೆ ಕಾರ್ಯಕ್ಕೆ ಸಂಬಂಧಪಟ್ಟಂತೆ ನಾಳೆ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆಯೆಂದು ಪ್ರಕಟಣೆ ತಿಳಿಸಿದೆ.

110/33/11 ಕೆವಿ, ಪುತ್ತೂರು, ಕರಾಯ ಮತ್ತು ಮಾಡಾವು 33/11 ಕೆವಿ ಕುಂಬ್ರ, ಬೆಳ್ಳಾರೆ, ಕಾವು, ಸುಳ್ಯ, ಸುಬ್ರಹ್ಮಣ್ಯ, ಕಡಬ, ನೆಲ್ಯಾಡಿ, ಸವಣೂರು, ಕ್ಯಾಂಪ್ಕೋ, ಬಿಂದು ಫ್ಯಾಕ್ಟರಿ ಉಪಕೇಂದ್ರಗಳಿಂದ ಹೊರಡುವ ಎಲ್ಲಾ 11ಕೆವಿ ಫೀಡರ್ ಗಳಿಂದ ವಿದ್ಯುತ್ ನಿಲುಗಡೆ ಮಾಡುವುದಾಗಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಕಡಬ: ಗಣಿ ಹಾಗೂ ಕಂದಾಯ ಅಧಿಕಾರಿಗಳಿಂದ ದಾಳಿ ➤ ಅಕ್ರಮವಾಗಿ ಶೇಖರಿಸಿಟ್ಟಿದ್ದ 40 ಲೋಡ್ ಮರಳು ವಶಕ್ಕೆ

error: Content is protected !!
Scroll to Top