ಜೂ. 18ರಂದು ಪಿಯು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್..!?

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.19, ಜೂನ್ 18ರಂದು ನಡೆದಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆದಿದ್ದ ಓರ್ವ ವಿದ್ಯಾರ್ಥಿನಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ, ಆಕೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಕೈಗೆ ಸೀಲ್ ಹಾಕಿದ್ದು ಹೋಂ ಕ್ವಾರಂಟೈನ್ ನಲ್ಲಿದ್ದಳು ಎನ್ನಲಾಗಿದೆ. ಆದರೆ ಕೈಯಲ್ಲಿದ್ದ ಸೀಲ್ ಅಳಿಸಿಹಾಕಿ ಪರೀಕ್ಷೆ ಬರೆದಿದ್ದ, ಈಕೆಯ ರಿಪೋರ್ಟ್ ಪಾಸಿಟಿವ್ ಎಂದು ತಿಳಿಸಲಾಗಿದೆ. ಇದರಿಂದ ಪರೀಕ್ಷಾ ಕೇಂದ್ರದಲ್ಲಿದ್ದ ಇತರ ವಿದ್ಯಾರ್ಥಿನಿಯರು, ಶಿಕ್ಷಕರು, ಪರೀಕ್ಷೆ ಮೇಲ್ವಿಚಾರಕರು, ಹಾಗೂ ಅವರ ಮನೆಮಂದಿಯಲ್ಲೂ ಆತಂಕ ಉಂಟು ಮಾಡಿಸಿದೆ.ಇದೀಗ ವಿದ್ಯಾರ್ಥಿನಿಯೊಂದಿಗೆ ಸಂಪರ್ಕದಲ್ಲಿದ್ದವರ ಮಾಹಿತಿಯನ್ನೂ ಕೂಡಾ ಕಲೆಹಾಕಲಾಗುತ್ತಿದೆ.

Also Read  ಸಗಟು ಖರೀದಿ ಯೋಜನೆಯಡಿ ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ

error: Content is protected !!
Scroll to Top