ಸೋಮೇಶ್ವರದಲ್ಲಿ ಮತ್ತೆ ಕಡಲ್ಕೊರೆತ ➤ಆತಂಕದಲ್ಲಿ ಕಡಲ ತೀರದ ನಿವಾಸಿಗಳು

(ನ್ಯೂಸ್ ಕಡಬ) newskadaba.com.ಉಳ್ಳಾಲ,ಜೂ.19:ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಳ್ಳಾಲದ ಸೋಮೇಶ್ವರದಲ್ಲಿ ಕಡಲ್ಕೊರೆತ ಉಂಟಾಗಿದೆ.


ಕಡಲ್ಕೊರೆತ ನಿಯಂತ್ರಣಕ್ಕಾಗಿ ಕಿನಾರೆಗೆ ಹಾಕಲಾಗಿದ್ದ ಬೃಹತ್ ಬಂಡೆಕಲ್ಲುಗಳನ್ನು ಭೇದಿಸಿ ಸಮುದ್ರದ ಅಲೆಗಳು ಮುನ್ನುಗ್ಗಿವೆ. ಅಲೆಗಳ ಅಬ್ಬರಕ್ಕೆ ಕಡಲ ನಿವಾಸಿಗಳು ಭಯಬಿದ್ದಿದ್ದಾರೆ. ಇಂದು ಮಳೆ ನಿಂತಿದ್ದರೂ ಕಡಲ ತೀರದ ನಿವಾಸಿಗಳು ಮಾತ್ರ ಕಡಲ್ಕೊರೆತದ ಭೀತಿಯಲ್ಲೇ ದಿನ ಕಳೆಯುತ್ತಿದ್ದಾರೆ.

error: Content is protected !!
Scroll to Top