ಕೇರಳ ರಾಜ್ಯ ತಂಡಕ್ಕೆ ತಿರುವನಂತಪುರ ಎಕ್ಸೆಪ್ರೆಸ್ ಖ್ಯಾತಿಯ ಶ್ರೀಶಾಂತನ ಪುನರಾಗಮನ

(ನ್ಯೂಸ್ ಕಡಬ) newskadaba.com.ತಿರುವನಂತಪುರ,ಜೂ.19:ಇದೇ ಸೆಪ್ಟಂಬರ್ ಕೊನೆಯಲ್ಲಿ ಕ್ರಿಕೆಟ್ ನಿಷೇಧದಿಂದ ಮುಕ್ತರಾಗುವ ಪೇಸ್ ಬೌಲರ್ ಎಸ್. ಶ್ರೀಶಾಂತ್ ಕೇರಳ ರಣಜಿ ತಂಡಕ್ಕೆ ಮತ್ತೊಮ್ಮೆ ಸೆರ್ಪಡೆಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.


ಶ್ರೀ ಕೇರಳ ರಣಜಿ ತಂಡದ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ಕೋಚ್ ಟಿನು ಯೋಹಾನನ್ ಹೇಳಿದ್ದಾರೆ. ಇದರಿಂದ ಕೇರಳ ರಣಜಿ ತಂಡಕ್ಕೆ ಮತ್ತಷ್ಟು ಹುರುಪಿನಿಂದ ಕಣಕ್ಕಿಳಿಯಬಹುದು.


ಐಪಿಎಲ್ ಸ್ಪಾಟ್ ಫಿಕ್ಸಿಂಗ್‍ನಲ್ಲಿ ಭಾಗಿಯಾದ ಕಾರಣಕ್ಕೆ 2013ರ ಆಗಸ್ಟ್‍ನಲ್ಲಿ ಶ್ರೀ ಶಾಂತ್ ಅವರಿಗೆ ಆಜೀವ ನಿಷೇಧ ವಿಧಿಸಿತ್ತು. ಆದರೆ ಕಳೆದ ವರ್ಷ ಬಿಸಿಸಿಐ ಅಜೀವ ನಿಷೇಧ ರದ್ದು ಗೊಳಿಸಿ 7 ವರ್ಷಕ್ಕೆ ಇಳಿಸಿತ್ತು. ಇದೀಗ ನಿಷೇಧ ಮುಗಿಸಿ ಪುನರಾಗಮನ ಮಾಡುತ್ತಿರುವುದು ತಂಡದ ಬೌಲಿಂಗಿಗೆ ಪ್ಲಸ್ ಪಾಯಿಂಟ್ ಆದರೆ ಮೊದಲಿನ ಬೌಲಿಂಗ್ ಮೊಣಚು ಇದೇಯೆ ಎಂಬುದು ಮಾತ್ರ ಕಾದುನೋಡಬೇಕು.

Also Read  200 ವರ್ಷಗಳ ನಂತರ ಈ 8 ರಾಶಿಯವರು ಶ್ರೀಮಂತರಾಗುತ್ತಾರೆ ಅದೃಷ್ಟದ ಬಾಗಿಲು ತೆರೆಯಲಿದೆ

error: Content is protected !!
Scroll to Top