(ನ್ಯೂಸ್ ಕಡಬ)newskadaba.com ನವದೆಹಲಿ, ಜೂ.18, ಭಾರತ-ಚೀನಾ ಗಡಿಯಲ್ಲಿ ಚೀನಾ ನಡೆಸುತ್ತಿರುವ ಕೃತ್ಯದಿಂದ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್)ಗೆ ಸೂಚನೆ ನೀಡಿದೆ.
ಟೆಲಿಕಾಂ ಕಂಪೆನಿಗಳಾದ ಏರ್‍ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಸ್ತುತ ಚೀನಾ ಮೂಲದ ಹುವಾಯಿ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದು, ಇತ್ತ ಬಿಎಸ್‍ಎನ್‍ಎಲ್‍ನೊಂದಿಗೆ ಝಡ್‍ಟಿಇ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಚೀನಾದ ಸಂಸ್ಥೆಗಳು ತಯಾರಿಸುವ ಸಲಕರಣೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡವಂತೆ ಭಾರತದಲ್ಲಿರುವ ಖಾಸಗಿ ಕಂಪೆನಿಗಳಿಗೆ ಸಲಹೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷಣೆ ಹಿನ್ನೆಲೆಯಲ್ಲಿ ಕೇಂದ್ರ ಮಧ್ಯೆ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ಕರ್ನಾಟಕ ಅಷ್ಟೇ ಅಲ್ಲದೆ ದೇಶದ ವಿವಿಧ ಮೂಲೆಯಲ್ಲಿ ಚೀನಾ ವಸ್ತು, ಸೇವೆಗಳ ಬಳಕೆ ನಿಷೇಧಕ್ಕೆ ಕೂಗು ಕೇಳಿ ಬಂದಿದೆ.