(ನ್ಯೂಸ್ ಕಡಬ)newskadaba.com ಕಡಬ. ಜೂ. 18, ಕಡಬ ತಾಲೂಕು ಆಡಳಿತ ವತಿಯಿಂದ ಇಂದು ಮಾಸ್ಕ್ ಡೇ ಆಚರಿಸಲಾಯಿತು. ಕಡಬ ತಾಲುಕು ಕಛೇರಿಯಿಂದ ಪಂಜ ಕ್ರಾಸ್ ತನಕ ಜನ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ ಕೊರೋನಾ ಹೋಗಲಾಡಿಸುವಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಹಕರಿಸಬೇಕು ಎಂದರು. ಕಡಬ ತಾಲೂಕು ಕಛೇರಿಯಿಂದ ಪಂಜ ಕ್ರಾಸ್ ತನಕ ಕೊರೋನಾ ಜಾಗೃತಿ ಮೂಡಿಸುವ ಸಲುವಾಗಿ ಪ್ಲೇ ಕಾರ್ಡ್ ಹಿಡಿದು ಪಾದಯಾತ್ರೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಬಾಬು ಮುಗೇರ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್, ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಕಡಬ ಠಾಣಾ ಉಪನಿರೀಕ್ಷಕ ರುಕ್ಮ ನಾಯಕ್ ಹಾಗೂ ಗ್ರಾ.ಪಂ. ಸದಸ್ಯರು, ತಾಲೂಕು ಕಛೇರಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.