ಸಾವಿನಲ್ಲೂ ಒಂದಾದ ದಂಪತಿಗಳು

(ನ್ಯೂಸ್ ಕಡಬ) newskadaba.com.ಬಾಗಲಕೋಟೆ,ಜೂ.17:ಮನೆಯಲ್ಲಿ ನಡೆದ ವಿದ್ಯುತ್ ಅವಘಡದಿಂದಾಗಿ ದಂಪತಿ ಸಾವನಪ್ಪಿರುವ ಘಟನೆ ಬಾಗಲಕೋಟೆಯ ನಗರದಲ್ಲಿ ನಡೆದಿದೆ.


ಶ್ಯಾಮರಾವ್(70). ಸರೋಜಾ(60) ಸಾವಿಗೀಡಾದ ದಂಪತಿ. ಪತ್ನಿ ಸರೋಜಾ ಅವರು ಮನೆ ಆವರಣದ ಪಂಪ್ ಸೆಟ್ ಚಾಲನೆ ಮಾಡಲು ತೆರಳಿದ ಸಂದರ್ಭ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಸರೋಜಾ ಅವರಿಗೆ ವಿದ್ಯುತ್ ತಗುಲಿದೆ. ಈ ಹಿನ್ನೆಲೆ ಸರೋಜಾ ಜೋರಾಗಿ ಚೀರಿಕೊಂಡಿದ್ದಾರೆ. ತಕ್ಷಣ ಅವರ ಶಬ್ದ ಕೇಳಿದ ಪತಿ ಶ್ಯಾಮರಾವ್. ತಕ್ಷಣ ರಕ್ಷಿಸಲು ಧಾವಿಸಿದಾಗ ಅವರಿಗೂ ವಿದ್ಯುತ್ ಸ್ವರ್ಶವಾಗಿದ್ದು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಗರದ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದಂಪತಿ ಇಬ್ಬರೂ ಮಕ್ಕಳನ್ನೂ ಅಗಲಿದ್ದಾರೆ.

Also Read  ಹೈಟೆಕ್ ಅಂಗನವಾಡಿ ಕಟ್ಟಡ – “ಅಜ್ಜಿಮನೆ”

error: Content is protected !!
Scroll to Top