ಧರ್ಮಸ್ಥಳ ಮಹಿಳೆಯರ ನೆರವಿಗೆ ಜ್ಞಾನವಿಕಾಸ ಯೂ ಟ್ಯೂಬ್ ಚಾನಲ್

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜೂ.17 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳನ್ನು ವಿಡೀಯೊ ಚಿತ್ರಿಕರಣದ ಮೂಲಕ ಮಾಹಿತಿ ನೀಡುವ ಸಲುವಾಗಿ ಜ್ಞಾನವಿಕಾಸ ಯೂ ಟ್ಯೂಬ್ ಚಾನಲ್‍ನ್ನು ಧರ್ಮಸ್ಥಳದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಗೆಳತಿ ಜ್ಞಾನ ಕೇಂದ್ರದ ಅಧ್ಯಕ್ಷರಾದ ಶ್ರದ್ದಾ ಅಮಿತ್ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಪ್ರಾರಂಭಿಸಲಾದ ಜ್ಞಾನ ವಿಕಾಸ ಯೂ ಟ್ಯೂಬ್ ಚಾನಲ್‍ನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಲೋಕಾರ್ಪಣೆಗೊಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸುತ್ತಿರುವ ಅನೇಕ ಸಂಸ್ಥೆಗಳಲ್ಲಿ ಇರುವ ಮಾಹಿತಿ. ಸಂಪನ್ಮೂಲಗಳನ್ನು ಸದಸ್ಯರಿಗೆ ತಲುಪಿಸುವುದಕ್ಕಾಗಿ ಹಾಗೂ ಮಹಿಳೆಯರ ದೈನಂದಿನ ಜೀವನ ನಿರ್ವಹಣೆ. ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆ. ಸರಕಾರಿ ಯೋಜನೆಗಳ ಮಾಹಿತಿ. ಸ್ವ-ಉದ್ಯೋಗಕ್ಕೆ ಇರು ಅವಕಾಶಗಳು ಮತ್ತು ಕಾನೂನಿನ ಅರಿವು. ಆಪ್ತ ಸಮಾಲೋಚನೆ. ಮಕ್ಕಳ ಮಾನಸಿಕ ಬೆಳವಣಿಗಳ ಕರಿತ ಮಾಹಿತಿ. ಮಕ್ಕಳಿಗಾಗಿ ಸುಭಾಷಿತ. ಮೌಲ್ಯಧರಿತ ಕಥೆಗಳು. ಮಹಿಳೆಯರು ಓದಬಹುದಾದ ಪುಸ್ತಕಗಳ ಕುರಿತು ಮಾಹಿತಿ ಹೀಗೆ ಹಲವಾರು ವಿಷಯಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಕ್ರೋಡೀಕರಣ ಮತ್ತು ಗ್ರಾಮೀಣ ಭಾಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಯೂ ಟ್ಯೂಬ್ ಚಾನಲ್‍ನ್ನು ಪ್ರಾರಂಭಿಸಲಾಗಿದೆ.

error: Content is protected !!

Join the Group

Join WhatsApp Group