ಮೂಡಬಿದಿರೆ ಕಾಡಿನಿಂದ ನಾಡಿಗೆ ಬಂದ ಕಾಡುಕೋಣ ➤ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com.ಮೂಡಬಿದಿರೆ,ಜೂ.17:ಮೂಡಬಿದಿರೆಯ ಕಲ್ಲಬೆಟ್ಟು ಗಂಟಾಲ್ಕಟ್ಟೆ ಚರ್ಚ್ ಬಳಿ ಅಸ್ವಸ್ಥಗೊಂಡ ಕಾಡುಕೋಣವೊಂದು ಮಂಗಳವಾರ ರಾತ್ರಿ ಕಾಣಿಸಿಕೊಂಡಿದೆ.

ಪುರಸಭಾ ವ್ಯಾಪ್ತಿಯಲ್ಲಿ ಕರಿಂಜೆ ಗ್ರಾಮದ ಕರಿಂಜೆಗುತ್ತು ಪರಿಸರದಲ್ಲಿ ಮಂಗಳವಾರ ಬೆಳಗ್ಗೆ ಕಾಣಿಸಿಕೊಂಡಿತ್ತು ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ತಿಳಿಸಿದರು.ಸ್ಥಳಕ್ಕೆ ಭೇಟಿನೀಡಿದ ಅರಣ್ಯ ಇಲಾಖಾ ಅಧಿಕಾರಿಗಳು ದಿನವಿಡೀ ಹುಡುಕಾಟ ನಡೆಸಿದರು.ಆದರೆ ಎಲ್ಲೂ ಪತ್ತೆ ಯಾಗಿರಳಿಲ್ಲ.

ರಾತ್ರಿ 9.30 ಸುಮಾ

ರಿಗೆ ಕಲ್ಲಬೆಟ್ಟು ಗಂಟಾಲ್ಕಟ್ಟೆ ಚರ್ಚ್ ಬಳಿ ಅಸ್ವಸ್ಥಗೊಂಡ ರೀತಿಯಲ್ಲಿ ಪತ್ತೆಯಾಯಿತು. ಕೂಡಲೇ ಕಾರ್ಯಪ್ರವೃತರಾದ ಅರಣ್ಯ ಇಲಾಖೆ ಕಾಡುಕೋಣವನ್ನು ಹಿಡಿಯುವಲ್ಲಿ. ಸಫಲಾರಾಗಿದ್ದಾರೆ. ನಂತರ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡಲಾಗುವುದೆಂದು ಮಾಹಿತಿ ನೀಡಿದ್ದಾರೆ.

Also Read  ಪತಿಯ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ ದೂರು ದಾಖಲು

error: Content is protected !!
Scroll to Top