ಕೊರೊನಾಗೆ ಬಲಿಯಾದ ಪೋಲಿಸ್

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.16: ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಸಂಚಾರ ಠಾಣೆ ಎಎಸ್‍ಐ ಒಬ್ಬರು ಮೃತಪಟ್ಟಿರು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರೊಂದಿಗೆ ಕೊರೊನಾ ಕರ್ನಾಟಕದಲ್ಲಿ ಮೊದಲ ಪೋಲಿಸ್ ಬಲಿ ಪಡೆದುಕೊಂಡಿದೆ.


ಮೃತರು ಬೆಂಗಳೂರು ವಿ.ವಿ.ಪುರಂ ಸಂಚಾರಿ ಠಾಣೆ ಎಎಸ್‍ಐ ಇನ್ನೂ 15 ದಿನಗಳಲ್ಲಿ ನಿವೃತ್ತರಾಗಲಿದ್ದರು. ಥಣಿಸಂದ್ರದ ಮನೆಯಲ್ಲಿ ದಿಢೀರನೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮರಣೋತ್ತರ ತಪಾಸಣೆ ನಡೆಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ವಿಷಯ ತಿಳಿದ ಪೋಲಿಸ್ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಅದೇ ಠಾಣೆಯ ಮತ್ತೊಬ್ಬ ಎಎಸ್‍ಐಗೂ ಸೋಂಕು ತಗುಲಿದೆ. ಇದರಿಂದಾಗಿ ಇಡೀ ಠಾಣೆಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

Also Read  ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್.!➤ಪ್ರಕರಣ ದಾಖಲು

error: Content is protected !!
Scroll to Top