ಜುಲೈ 2ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 16, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಕೊನೆಗೂ ಕ್ಷಣಗಣನೆ ನಿಗದಿಯಾಗಿದೆ.

ಡಿ.ಕೆ. ಶಿವಕುಮಾರ್ ಅವರು ಜುಲೈ 2 ರಂದು ಕೆಪಿಸಿಸಿಯ ನೂತನ ಕಛೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಪದಗ್ರಹಣಕ್ಕೆ ಈ ಮೊದಲು ಯೋಜನೆ ಹಾಕಲಾಗಿತ್ತಾದರೂ, ಕೊರೋನಾ ಹಿನ್ನೆಲೆಯಿಂದಾದ ಲಾಕ್ ಡೌನ್ ನಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ ಲಾಕ್ ಡೌನ್ ತೆರವಾದ ಬಳಿಕ ಸರಕಾರ ಅನುಮತಿ ನೀಡಿದ್ದು, ಜು.2 ರಂದು ಪದಗ್ರಹಣ ನಡೆಯಲಿದೆ ಎಂದು ತಿಳಿದು ಬಂದಿದೆ.

Also Read  ಸುಳ್ಯ: ಅಪ್ರಾಪ್ತ ಯುವತಿ ಆತ್ಮಹತ್ಯೆ

error: Content is protected !!
Scroll to Top