ಕಾಸರಗೋಡು ಗಾಂಜಾ ಸಹಿತ ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com.ಕಾಸರಗೋಡು,ಜೂ.16:ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಕೊಂಡಿದ್ದ 10 ಕಿಲೋ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿರುವ ಘಟನೆ ಕಾಸರಗೋಡಿನ ಮಂಜೇಸ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಮಂಜೇಶ್ವರದ ಮೀಯಪದವಿನ ನಿವಾಸಿ ವಿನ್ಸೆಂಟ್ ಡಿ ಸೋಜ(33) ಬಂಧಿತ ಆರೋಪಿ. ಈತ ಹಲವು ವರ್ಷಗಳಿಂದ ಗಾಂಜಾ ವಹಿವಾಟು ಮಾಡುತ್ತಿದ್ದ ಎಂದು ಪೋಲಿಸರ ಕಾರ್ಯಚರಣೆ ನಂತರ ತಿಳಿದು ಬಂದಿದೆ. ಡಿ ವೈ ಎಸ್ ಪಿ ಬಾಲಕೃಷ್ಣನ್ ನೇತೃತ್ವದ ಪೋಲಿಸ್ ತಂಡ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಗಾಂಜಾ ಸಹಿತ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Also Read  ಅಮರಮುಡ್ನೂರು: ಘನ ಮತ್ತು ದ್ರವ್ಯ ತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿ ಕೊನೆಯ ಹಂತ

error: Content is protected !!
Scroll to Top