ಕರ್ನಾಟಕದಲ್ಲಿ ಗುರುವಾರ ಮಾಸ್ಕ್ ಡೇ ಆಚರಣೆಗೆ ಸಿದ್ಧತೆ

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.15:ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾದಿಂದಾಗಿ ತಳೆಕೆಡಿಸಿಕೊಂಡಿರುವ ಸರಕಾರ ಇದರಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಮಾಡಿದೆ ಆದರೆ ಇದು ಎಲ್ಲಾ ಕಡೆಗಳಲ್ಲಿ ಆಗುತ್ತಿಲ್ಲಾ ಹಾಗಾಗಿ ಅರಿವು ಮೂಡಿಸುವ ಸಲುವಾಗಿ ಗುರುವಾರ ಮಾಸ್ಕ್ ಡೇ ಆಚರಿಸಲು ಸರಕಾರ ನಿರ್ಧರಿಸಿದೆ.


ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿಅಧಿಕಾರಿಗಳ ಜೊತೆಗೆ ಸೋಮವಾರ ಸಿಎಂ ಬಿಎಸ್‍ವೈ ಚರ್ಚೆ ನಡೆಸಿ ನಂತರ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.ಕೊರೊನಾದಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಒಂದು ಉತ್ತಮ ಕ್ರಮ ಆದರೆ ಇದನ್ನು ಎಲ್ಲಾ ಪ್ರದೇಶಗಳಲ್ಲಿ ಜನರು ಅನುಸರಿಸುತ್ತಿಲ್ಲಾ ಮಾಸ್ಕ್ ಇಲ್ಲದೆ ಬೇಕಾಬಿಟ್ಟಿ ಓಡಾಟ ನಡೆಸುವ ಜನರಿಗೆ. ಮಾಸ್ಕ್‍ನ ಅರಿವಾಗಬೇಕಾಗಿದೆ. ಈಗ ಮಾಸ್ಕ್ ಡೇ ಆಚರಿಸುವ ಮೂಲಕ ಕೊರೊನಾ ಜಾಗೃತಿ ಮೂಡಿಸಲು ಮುನ್ನುಗ್ಗುತ್ತಿದೆ.

Also Read  ಸಮುದ್ರ ತೀರದಲ್ಲಿ ಗೋವಿನ ಅವಶೇಷ ಪತ್ತೆ..!            ಪ್ರಕರಣ ದಾಖಲು      

error: Content is protected !!
Scroll to Top