(ನ್ಯೂಸ್ ಕಡಬ)newskadaba.com ಜೂ.15,ಮರ್ಕಝ್ ಹಳೆ ವಿದ್ಯಾರ್ಥಿಗಳ ಸಂಘಟನೆಯಾದ ಮರ್ಕಝ್ ಆಲುಮ್ನಿ ಯುಎಇ ಚಾಪ್ಟರ್ ವತಿಯಿಂದ 40 ವಿಮಾನಗಳ ಓಡಾಟಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ.
ಇದರ ಅಂಗವಾಗಿ ಮೊದಲ ವಿಮಾನವು ಜೂ. 17 ಮತ್ತು ಎರಡನೇ ವಿಮಾನ ಜೂ.18 ರಂದು ಯುಎಇಯಿಂದ ಕಲ್ಲಿಕೋಟೆಗೆ ಹಾರಲಿದೆ. ಇಂಡಿಯನ್ ಗ್ರಾಂಡ್ ಮುಫ್ತಿ ಅಲ್ ಹಾಜ್ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ನಿರ್ದೇಶನದ ಮೇರೆಗೆ ಕಲ್ಲಿಕೋಟೆ, ಕಣ್ಣೂರು,ಕೊಚ್ಚಿ, ತಿರುವನಂತಪುರಂ, ದೆಹಲಿ, ಹೈದರಾಬಾದ್, ಚೆನ್ನೈ, ಅಮೃತಸರ ಮತ್ತಿತರ ಪ್ರದೇಶಗಳಿಗೆ ಬಾಡಿಗೆ ವಿಮಾನ ಯಾನ ನಡೆಸಲಿದೆ ಎಂದು ಮರ್ಕಝ್ ಡೈರೆಕ್ಟರ್ ಅಬ್ದುಲ್ ಹಕೀಂ ಅಝ್ಹರಿ ತಿಳಿಸಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ರೋಗಿಗಳಿಗೆ, ಗರ್ಭಿಣಿಯರಿಗೆ, ಕೆಲಸವಿಲ್ಲದೆ ಸಂಕಷ್ಟದಲ್ಲಿರುವವರಿಗೆ ಮರ್ಕಝ್ ನಡೆಸುವ ಈ ಸೇವೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದು ಯುಎಇ ಆಲುಮ್ನಿ ಅಧ್ಯಕ್ಷ ಸಲಾಮ್ ಕೊಳಿಕ್ಕಲ್ ತಿಳಿಸಿದ್ದಾರೆ.