ಇನ್ನಷ್ಟು ದಾಖಲೆಗಳ ಅವಕಾಶದಿಂದ ಹಿಂದೆ ಸರಿದ ಧೋನಿ ➤ಗೌತಮ್ ಗಂಭೀರ್ ಮಹತ್ವದ ಹೇಳಿಕೆ

(ನ್ಯೂಸ್ ಕಡಬ) newskadaba.com.ಮುಂಬೈ,ಜೂ.14:ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಒಂದು ವೇಳೆ ಟೀಂ ಇಂಡಿಯಾ ನಾಯಕತ್ವ ವಹಿಸದೇ ಇದ್ದರೆ ಅವರ ದಾಖಲೆಗಳ ಪಟ್ಟಿ ಇನ್ನೂ ವಿಶೇಷವಾಗಿರುತ್ತಿತ್ತು ಎಂದು ಗೌತಮ್ ಗಂಭೀರ್ ಮಹತ್ವದ ಹೇಳಿಕೆ ನೀಡಿದ್ದಾರೆ.


ಸ್ಟಾರ್ ಸ್ಪೋರ್ಟ್‍ನ ಕ್ರಕಿಟ್ ಕನೆಕ್ಟ್‍ಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, ಒಂದು ವೇಳೆ ಧೋನಿ ನಾಯಕತ್ವದ ಹೊರತಾಗಿ ಮೂರನೇ ಕ್ರಮಾಂಕದಲ್ಲಿ ಆಡುವ ನಿರ್ಧಾರ ಮಾಡಿದ್ದರೆ ಅವರು ವಿಶ್ವದ ಅತ್ಯಂತ ರೋಮಾಂಚನಕಾರಿ ಕ್ರಿಕೆಟ್‍ರ್ ಆಗಿರುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.


ಮೂರನೇ ಕ್ರಮಾಂಕದಲ್ಲಿ ಬ್ಯಾಂಟಿಂಗ್ ಮಾಡಿ ಪಾಕಿಸ್ಥಾನ ಮತ್ತು ಲಂಕಾ ವಿರುದ್ಧ ಭರ್ಜರಿ ಶತಕಗಳಿಂದ ಧೋನಿ ವಿಶ್ವದಲ್ಲಿ ಗುರುತಿಸಿಕೊಂಡವರು.ಮೂರನೇ ಕ್ರಮಾಂಕದಲ್ಲಿ ಧೋನಿ 16 ಪಂದ್ಯಗಳನ್ನು ಆಡಿದ್ದಾರೆ. 82ರ ಸರಾಸರಿಯಲ್ಲಿ 993 ರನ್ನು ಗಳಿಸಿದ್ದರು. ಆದರೆ ನಾಯಕತ್ವ ವಹಿಸಿದ ನಂತರ ಐದು ಮತ್ತು ಆರನೇ ಕ್ರಮಾಂಕದಲ್ಲಿ ಆಡಿದ ಧೋನಿ ಏಕದಿನ ಕ್ರಿಕೆಟ್‍ನಲ್ಲಿ 10773 ರನ್ ಸಡಿಸಿದ್ದಾರೆ. ಧೋನಿ ಮೂರನೇ ಕ್ರಮಾಂಕದಲ್ಲಿ ಆಡಿದ್ದರೆ ಅವರು ಇನ್ನಷ್ಟು ರನ್ ಗಳಿಸುತ್ತಿದ್ದರು ಇನ್ನಷ್ಟು ದಾಖಲೆಗಳನ್ನು ತನ್ನ ಮುಡಿಗೆರಿಸಿಕೊಳ್ಳುತ್ತಿದ್ದರು ಎಂದು ತಮ್ಮ ಮನದಾಳದ ಮಾತನಾಡಿದ್ದಾರೆ.

Also Read  ಶಾರ್ಜಾ ಜೈಲಿನಿಂದ ಬಾಲಿವುಡ್‌ ನಟಿ ಕ್ರಿಸನ್ ಪಿರೇರಾ ಬಿಡುಗಡೆ

error: Content is protected !!
Scroll to Top