(ನ್ಯೂಸ್ ಕಡಬ)newskadaba.com ಕಡಬ. ಜೂ. 14, ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಎಂಡೋ ಪೀಡಿತ ಕುಂಟುಂಬಕ್ಕೆ ಸುಳ್ಯ ಶಾಸಕ ಎಸ್.ಅಂಗಾರ ಆಹಾರಕಿಟ್ ವಿತರಣೆ ಮಾಡಿದರು.
ಶಾಸಕರು ತಮ್ಮ ಸ್ವಂತ ಖರ್ಚಿನಿಂದ ಸುಮಾರು 400 ಕಿಟ್‍ಗಳನ್ನು ನೆಲ್ಯಾಡಿ ಶಕ್ತಿ ಕೇಂದ್ರದಲ್ಲಿರುವ ಎಂಡೋ ಪೀಡಿತರು ಹಾಗೂ ವಿಕಲಚೇತನರಿಗೆ ವಿತರಣೆ ಮಾಡಿದರು. ಶಾಸಕರು ಕೊಯಿಲ ಎಂಡೋ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಎಂಡೋ ಪೀಡಿತರ ಪೋಷಕರಿಗೆ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಜಯಂತಿ ಆರ್ ಗೌಡ, ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾ ಮೋಹನ್‍ದಾಸ್ ಶೆಟ್ಟಿ, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್.ಕೆ , ಪ್ರಮುಖರಾದ ಶೀನಪ್ಪ ಗೌಡ ವಳಕಡಮ, ಬಾಲಕೃಷ್ಣ ಗೌಡ ಬೇಂಗದಪಡ್ಪು, ಗಂಗಾರತ್ನ ವಸಂತ್, ಲಕ್ಷ್ಮೀನಾರಾಯಣ ರಾವ್ ಆತೂರು, ರಾಮಚಂದ್ರ ನಾಯ್ಕ ಏಣಿತಡ್ಕ, ಮೋನಪ್ಪ ಕುಲಾಲ್, ಉಮೇಶ್ ಸಂಕೇಶ, ಕೇಶವ ಗಾಂಧಿಪೇಟೆ ಮತ್ತಿತರರು ಉಪಸ್ಥಿತರಿದ್ದರು.