(ನ್ಯೂಸ್ ಕಡಬ) newskadaba.com.ನವದೆಹಲಿ,ಜೂ.14:ದೇಶಾದ್ಯಾಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದರೆ ಇತ್ತಕಡೆ ವೈರಸ್ ಮೇಲಿನ ಸಂಶೋದನೆಯು ಮುಂದುವರಿಯುತ್ತಿದೆ. ಇದ್ದಕ್ಕಿದ್ದಂತೆ ವಾಸನೆ, ರುಚಿ ಗ್ರಹಣ ಶಕ್ತಿ ನಷ್ಟವಾಗುವುದೂ ಕೂಡ ಕೋವಿಡ್-19 ಸೋಂಕಿನ ಲಕ್ಷಣವಾಗಿರಬಹುದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕೋವಿಡ್ ಲಕ್ಷಣಗಳ ಪಟ್ಟಿಗೆ ಈ ಅಂಶವನ್ನೂ ಶನಿವಾರ ಸೇರಿಸಲಾಗಿದೆ. ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವ ಅನೇಕ ರೋಗಿಗಳು, ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳ ಜೊತೆಗೆ ವಾಸನೆ ಹಾಗೂ ರುಚಿ ಗ್ರಹಣ ನಷ್ಟವಾಗಿರುವ ಬಗ್ಗೆಯು ಹೇಳಿಕೊಂಡಿದ್ದಾರೆ, ಎಂದು ಸಚಿವಾಲಯ ತಿಳಿಸಿದೆ.
ಪ್ರಮುಖವಾಗಿ 60ವರ್ಷ ಮೇಲ್ಟ ಹಿರಿಯರಲ್ಲಿ ಇದರ ಪರಿಣಾಮ ಹೆಚ್ಚು. ಅವರಲ್ಲಿ ರೋಗನಿರೋಧಕ ಸಾಮಥ್ರ್ಯ ಕಡಿಮೆ ಇರುವುದೆ ಪ್ರಮುಖ ಕಾರಣ ಇದರ ಜೊತೆಗೆ ಕೊರೊನಾ ಸೋಂಕಿತ ವ್ಯಕ್ತಿ ಸೀನಿವುದರಿಂದ, ಕೆಮ್ಮುವಾಗ ಅಥವಾ ಮಾತನಾಡುವಾಗ ಹೊರ ಬರುವ ದ್ರವಾಂಶಗಳಿಂದಲೇ ಹೆಚ್ಚಾಗಿ ಸೋಂಕು ವ್ಯಾಪಿಸುವ ಸಾಧ್ಯತೆ ಇದರಿಂದಾಗಿ ಎಚ್ಚರಿಕೆಯಿಂದಿರಬೇಕೆಂದು ಹೇಳಿದೆ.