ಸೂರ್ಯಗ್ರಹಣ ಪ್ರಯುಕ್ತ ಜೂನ್ 21ರಂದು ಧರ್ಮಸ್ಥಳ ದೇವರ ದರ್ಶನದಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com.ಧರ್ಮಸ್ಥಳ,ಜೂ.14:ಜೂ. 21 ರಂದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನದಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ.


ಈ ವರ್ಷದ ಮೊದಲ ಸೂರ್ಯಗ್ರಹಣ ಜೂ.21 ನಡೆಯುದರಿಂದಾಗಿ ಬೆಳಗ್ಗೆ 5.30ರಿಂದ 9ರ ವರೆಗೆ ದರ್ಶನ ಅವಕಾಶವಿದೆ. ಬೆಳಗ್ಗೆ 6ಕ್ಕೆ ದೇವರಿಗೆ ಅಭಿಷೇಕ ಪ್ರಾರಂಭಗೊಂಡು 9.30ಕ್ಕೆ ಮಹಾಪೂಜೆ ಜರುಗಲಿದೆ. ಆ ಬಳಿಕ ಸಂಜೆ 4 ಗಂಟೆಗೆ ದೇವಸ್ಥಾನ ಬಾಗಿಲು ತೆರೆಯಲಿದ್ದು ರಾತ್ರಿ 8.30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Also Read  ಖಾಸಗಿ ಬಸ್ ಡಿಕ್ಕಿಯಾಗಿ ಬಾಲಕ ಮೃತ್ಯು..!           

error: Content is protected !!
Scroll to Top