ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತು ಆನ್‌ಲೈನ್ ಕ್ಲಾಸ್ ಗೆ ವಿರೋಧ ➤ ಜಾಗಟೆ ಪ್ರತಿಭಟನೆ ನಡೆಸಿದ ವಾಟಾಳ್

(ನ್ಯೂಸ್ ಕಡಬ)newskadaba.com ಆನ್ ಲೈನ್ ಕಲಿಕೆ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುವ ವಿಚಾರವನ್ನು ವಿರೋಧಿಸಿ ವಾಟಾಳ್ ನಾಗರಾಜ ಅವರು ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಜಾಗಟೆ ಪ್ರತಿಭಟನೆ ಮಾಡಿದರು.

ಕೂಡಲೇ ಸರಕಾರ ಎಸ್ಎಸ್ಎಲ್ ಸಿ ಪರೀಕ್ಷೆ ಹಾಗೂ ಆನ್ ಲೈನ್ ಕಲಿಕೆ ರದ್ದುಗೊಳಿಸಬೇಕು. ಯಾರೇ ಏನೇ ಹೇಳಿದರೂ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಬಾರದು. ಶೈಕ್ಷಣಿಕ ವರ್ಷ ಮೊಟಕುಗೊಳಿಸಿ ಎಲ್ಲರನ್ನೂ ಪಾಸ್ ಮಾಡಬೇಕು ಎಂದರು.

ಕೋವಿಡ್-19 ಸೋಂಕು ಇದ್ದಾಗ ಲಾಕ್ ಡೌನ್ ಮಾಡಿದರು, ಆದರೆ ಇದೀಗ ಸೋಂಕು ಪ್ರಕರಣ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ಸರಕಾರ ಮುಂದಾಗಿರುವುದು ಅವೈಜ್ಞಾನಿಕ. ಪಾಲಕರು, ಪೋಷಕರು ಪರೀಕ್ಷೆಗೆ ಹಾಗೂ ಶೈಕ್ಷಣಿಕ ವರ್ಷಕ್ಕೆ ವಿರೋಧ ವ್ಯಕ್ತಪಡಿಸಿದರೂ, ಸರಕಾರಕ್ಕೆ ಶಾಲೆ ಆರಂಭ ಹಾಗೂ ಪರೀಕ್ಷೆ ನಡೆಸಲು ಮುಂದಾಗಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.

Also Read  ಸಹಕಾರ ಭಾರತಿ ವತಿಯಿಂದ ಜ.19ರಂದು ಬೃಹತ್ ಪ್ರತಿಭಟನೆ

ಇತರೆ ರಾಜ್ಯಗಳಲ್ಲಿ ಕೈಗೊಂಡಂತೆ ನಮ್ಮ ರಾಜ್ಯದಲ್ಲಿಯೂ ಪರೀಕ್ಷೆ ರದ್ದು ಮಾಡಬೇಕು. ಒಂದು ವೇಳೆ ಸರಕಾರ ಹಠಕ್ಕೆ ಬಿದ್ದು ಪರೀಕ್ಷೆ ನಡೆಸಲು ಮುಂದಾದರೆ ಪ್ರತಿ ವಿದ್ಯಾರ್ಥಿಗೆ 50 ಲಕ್ಷ ರೂ. ಶಿಕ್ಷಕರಿಗೆ 25 ಲಕ್ಷ ರೂ. ಠೇವಣಿ ಇಡಬೇಕು ಎಂದು ಆಗ್ರಹಿಸಿದರು.

error: Content is protected !!
Scroll to Top