ಭಾರತದ ಹಿರಿಯ ಕ್ರಿಕೆಟಿಗ ವಸಂತ್ ರಾಯ್ ಜಿ ನಿಧನ

(ನ್ಯೂಸ್ ಕಡಬ)newskadaba.com ಮುಂಬೈ. ಜೂ. 13, ಭಾರತದ ಅತಿ ಹಿರಿಯ ಕ್ರಿಕೆಟ್ ಆಟಗಾರರಾಗಿದ್ದ ವಸಂತ್‌ ರಾಯ್‌ಜಿ (100) ಶನಿವಾರ ನಸುಕಿನ ಜಾವ ನಿಧನರಾಗಿದ್ದಾರೆ.

ದಕ್ಷಿಣ ಮುಂಬೈನ ವಾಲಕೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿದ್ದಾಗಲೇ ಅವರು ನಿಧನರಾಗಿದ್ದಾರೆ ಎಂದು ಅವರ ಅಳಿಯ ಸುದರ್ಶನ್‌ ನಾನಾವತಿ ತಿಳಿಸಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ವಸಂತ್‌ ರವರು, 1940ರ ದಶಕದಲ್ಲಿ ಒಂಬತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಒಟ್ಟು 277 ರನ್‌ ಕಲೆಹಾಕಿದ್ದರು. ಪಂದ್ಯವೊಂದರಲ್ಲಿ 68 ರನ್‌ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 1939ರಲ್ಲಿ ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ ತಂಡದ ಮೂಲಕ ಅವರು ಪದಾರ್ಪಣೆ ಮಾಡಿದ್ದರು. ನಾಗ್ಪುರದಲ್ಲಿ ಸೆಂಟ್ರಲ್‌ ಪ್ರಾವಿನ್ಸ್‌ ಹಾಗೂ ಬಿರಾರ್‌ ವಿರುದ್ಧ ಈ ತಂಡ ಆಡಿತ್ತು. 1941ರಲ್ಲಿ ಮುಂಬೈ ತಂಡಕ್ಕೆ ಪದಾರ್ಪಣೆ ಮಾಡಿದರು. ಚಾರ್ಟಡ್‌ ಅಕೌಂಟೆಂಟ್‌ ಆಗಿದ್ದ ರಾಯ್‌ಜಿ ಅವರು ಕ್ರಿಕೆಟ್‌ ಇತಿಹಾಸಕಾರರಾಗಿಯೂ ಹೆಸರು ಮಾಡಿದ್ದರು. ಇವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Also Read  ಕೈಕಾಲು ಕಟ್ಟಿಹಾಕಿ ಅತ್ಯಾಚಾರವೆಸಗಿದ ರೀತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ

error: Content is protected !!
Scroll to Top