(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜೂನ್. 13, ಲಾಕ್ ಡೌನ್ ಬಳಿಕ ಬದ್ರಿಯಾ ಜುಮ್ಮಾ ಮಸ್ಜಿದ್ ತೆಕ್ಕಾರು ಮಸೀದಿಯಲ್ಲಿ ಪ್ರಥಮ ಬಾರಿಗೆ ಶುಕ್ರವಾರ ಜುಮಾ ನಮಾಝ್ ಸರ್ಕಾರದ ಆದೇಶದಂತೆ ನಿರ್ವಹಿಸಲಾಯಿತು.
ಸಂಪೂರ್ಣವಾಗಿ ಜಮಾಅತ್ ಖಾಝಿ ಮತ್ತು ಸರಕಾರದ ಕಾನೂನುಗಳನ್ನು ಅಕ್ಷರಶಃ ಪಾಲಿಸಲಾಯಿತು. ಜುಮಾ ಖುತುಬಕ್ಕೆ 10 ನಿಮಿಷಗಳ ಮುಂಚೆ ಮಸೀದಿ ತೆರೆಯಲಾಯಿತು. ಜಮಾಅತ್ ನಿವಾಸಿಗಳಿಗೆ ಮಾತ್ರ ಮಸೀದಿ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಮಸೀದಿ ಪ್ರವೇಶಕ್ಕೆ ಮುಂಚೆ ಹ್ಯಾಂಡ್ ವಾಷ್ ಬಳಸಲಾಯಿತು. ಸಾಮಾಜಿಕ ಅಂತರಗಳನ್ನು ಕಾಯ್ದುಕೊಂಡು ನಮಾಜ್ ನಿರ್ವಹಿಸಲಾಯಿತು. ಕೇವಲ ಜುಮಾ ನಮಾಜ್ ಗೆ ಅಷ್ಟೇ ಅವಕಾಶ ಕಲ್ಪಿಸಲಾಯಿತು. ಅರ್ಧ ಗಂಟೆಯಲ್ಲಿ ಪ್ರಾರ್ಥನೆಗಳನ್ನು ಮುಗಿಸಲಾಯಿತು. ನಮಾಜ್ ಗೆ ಆಗಮಿಸುವವರೇ ನಮಾಜ್ ಮಾಡುವ ಮುಸಲ್ಲ ತಂದು ಸಹಕರಿಸಿದರು. ಪ್ರತಿಯೊಬ್ಬರು ಮಾಸ್ಕ್ ಧರಿಸಿ ನಾಮಾಜ್ ನಲ್ಲಿ ಭಾಗವಹಿಸಿದರು. 14 ವರ್ಷಕ್ಕಿಂತ ಮೇಲೆಯೂ 65 ವರ್ಷಕ್ಕಿಂತ ಕೆಳಗಿನವರಿಗೆ ಮಾತ್ರ ಮಸೀದಿ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಜಮಾಅತ್ ಆಡಳಿತ ಸಮಿತಿಯ ನಿರ್ದೇಶನಗಳನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸಿ ಸಹಕರಿಸಿದರು. ನಿಯಮಗಳನ್ನು ಅಚ್ಚುಕಟ್ಟಾಗಿ ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು ಆಡಳಿತ ಸಮಿತಿ ನಡೆಸಿತ್ತು. ಸುಮಾರು ಎರಡು ವರೆ ತಿಂಗಳುಗಳ ಬಳಿಕ ಪ್ರಥಮ ಬಾರಿಗೆ ಮಸ್ಜಿದ್ ತೆರೆದಿದ್ದ ಕಾರಣ ಸತ್ಯ ವಿಶ್ವಾಸಿಗಳು ಮುಂಜಾಗ್ರತೆಯೊಂದಿಗೆ ಬಹಳ ಉತ್ಸಹಾದೊಂದಿಗೆ ಮಸೀದಿಯತ್ತ ತೆರೆಳಿದರು.