ಆತ್ಮ ನಿರ್ಭರ ಭಾರತ ಸಂಕಲ್ಪ ➤ ಪಂಜದಲ್ಲಿ ತರಕಾರಿ ಬೀಜ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಆತ್ಮನಿರ್ಭರ ಭಾರತ ಸಂಕಲ್ಪದ ಭಾಗವಾಗಿ ಪಂಜ ವ್ಯವಸಾಯ ಸೇವಾ ಬ್ಯಾಂಕಿನ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ತರಕಾರಿ ಬೀಜ ವಿತರಣೆ ಮಾಡಲಾಯಿತು.

ಗ್ರಾಮ ವಿಕಾಸ ಸಮಿತಿ ಪಂಜ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಬ್ಯಾಂಕ್ ಪಂಜ ಇದರ ಜಂಟಿ ಆಶ್ರಯದಲ್ಲಿ ಆತ್ಮನಿರ್ಭರ ಭಾರತ ಸಂಕಲ್ಪದ ಭಾಗವಾಗಿ ತರಕಾರಿ ಬೀಜ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಳ ವಹಿಸಿದ್ದರು. ದಿಕ್ಸೂಚಿ ಮಾರ್ಗದರ್ಶಕರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹಕರಾದ ಶ್ರೀ ನ ಸೀತಾರಾಮ ಭಾಗವಹಿಸಿದ್ದರು. ಅತಿಥಿಗಳಾಗಿ ಕಾರ್ಯಪ್ಪ ಗೌಡ ಚಿದ್ಗಲ್, ನೇಮಿರಾಜ್ ಪಲ್ಲೋಡಿ, ಚಂದ್ರಶೇಖರ ಶಾಸ್ತ್ರಿಯವರು ಉಪಸ್ಥಿತರಿದ್ದರು.

Also Read  ಕಸಾಪ ಚುನಾವಣೆ ಸೂಕ್ತ ಅಭ್ಯರ್ಥಿಯ ಆಯ್ಕೆಯಾಗಲಿ ➤ ಖಿದ್ಮಾ ಸಂಚಾಲಕ ಆಮಿರ್ ಬನ್ನೂರು ಅಭಿಪ್ರಾಯ

error: Content is protected !!
Scroll to Top