ಲಾಕ್ ಡೌನ್ ವೇಳೆಯಲ್ಲಿ ನೌಕರರಿಗೆ ವೇತನ ನೀಡದ ವಿಚಾರ ➤ ಮಾಲಕರ ಪರ ನಿಂತ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಜೂ.13, ಕೊರೋನ ವೈರಸ್ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ವೇತನ ಪಾವತಿಸದ ಮಾಲಕರ ವಿರುದ್ಧ ಜುಲೈ ಅಂತ್ಯದ ತನಕ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಈ ತೀರ್ಪು ಖಾಸಗಿ ಉದ್ಯೋಗದಾತರಿಗೆ ನಿಟ್ಟುಸಿರುಬಿಡುವಂತಾಗಿದೆ.

ನೌಕರರು ಹಾಗೂ ಉದ್ಯೋಗದಾತರ ನಡುವೆ ಮಾತುಕತೆ ನಡೆಸಲು ರಾಜ್ಯ ಸರಕಾರಗಳು ಅನುಕೂಲ ಮಾಡಿಕೊಡಬೇಕು. ತಮ್ಮ ವರದಿಯನ್ನು ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯವು ಮಾರ್ಚ್‌ನಲ್ಲಿ ಎಲ್ಲ ಉದ್ಯೋಗದಾತರಿಗೆ ಹೊರಡಿಸಿದ್ದ ತನ್ನ ಸುತ್ತೋಲೆಯಲ್ಲಿ ಕೋವಿಡ್-19 ಅನ್ನು ನಿಯಂತ್ರಿಸಲು ವಿಧಿಸಲಾಗಿರುವ ಲಾಕ್‌ಡೌನ್ ಸಮಯದಲ್ಲಿ ತಮ್ಮ ಸಂಸ್ಥೆಗಳು ಮುಚ್ಚಲ್ಪಟ್ಟ ಅವಧಿಗೆ ಯಾವುದೆ ಕಡಿತವಿಲ್ಲದೆ ತಮ್ಮ ಕಾರ್ಮಿಕರಿಗೆ ವೇತನವನ್ನು ಪಾವತಿಸುವಂತೆ ಕೇಳಿಕೊಂಡಿತ್ತು. ಕೇಂದ್ರ ಸರಕಾರದ ಈ ಸುತ್ತೋಲೆಯನ್ನು ಪ್ರಶ್ನಿಸಿದ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಶನ್ ಹಾಗೂ ಲುಧಿಯಾನ ಹ್ಯಾಂಡ್ ಟೂಲ್ಸ್ ಅಸೋಸಿಯೇಶನ್, ಫಿಕಸ್ ಪ್ಯಾಕ್ಸ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಜಸ್ಟಿಸ್‌ಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ಉನ್ನತ ನ್ಯಾಯಾಲಯದ ನ್ಯಾಯಪೀಠ ವಿಚಾರಣೆ ನಡೆಸಿ ಆದೇಶ ನೀಡಿದೆ.

Also Read  ದೇಶದಲ್ಲಿ ವಿಮಾನ ತಯಾರಿಕಾ ಕೇಂದ್ರ ಶೀಘ್ರದಲ್ಲೇ ಆರಂಭ..!

error: Content is protected !!
Scroll to Top