ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ



(ನ್ಯೂಸ್ ಕಡಬ)newskadaba.com ಕೊಳ್ಳೇಗಾಲ, ತಾಯಿಯೋರ್ವಳು ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.





 

ಮೃತರನ್ನು ಸಂಗೀತಾ (23) ಎಂದು ಗುರುತಿಸಲಾಗಿದೆ. 3 ವರ್ಷದ ಮಗ ಕರಣ್ ನನ್ನು ಹತ್ಯೆಗೈದ ಈಕೆ ಬಳಿಕ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಗ್ರಾಮದ ದೇಗುಲಕ್ಕೆ ತೆರಳುತ್ತೇನೆಂದು ಹೇಳಿ ಹೋದ ಸಂಗೀತಾ ಮನೆಯಿಂದ ತೆರಳಿದ್ದಾಳೆ ಎನ್ನಲಾಗಿದ್ದು, ಬಳಿಕ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ. ಸಾವಿಗೆ ಕಾರಣ ನಿಗೂಢವಾಗಿದ್ದು, ಘಟನೆ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top