ಕಡಬದ ವ್ಯಕ್ತಿಗೆ ಕೊರೋನಾ ನೆಗೆಟಿವ್ ➤ ನಿಟ್ಟುಸಿರು ಬಿಟ್ಟ ಕಡಬದ ಜನತೆ

(ನ್ಯೂಸ್ ಕಡಬ)newskadaba.com ಕಡಬ. ಜೂ.12, ಕಡಬದ ಕೊರೋನಾ ಪೀಡಿತ ವ್ಯಕ್ತಿಯೋರ್ವರ ಗಂಟಲ ದ್ರವದ ಪರೀಕ್ಷೆಯನ್ನು ಎರಡನೆಯ ಬಾರಿ ಮಾಡಲಾಗಿದ್ದು, ಇದೀಗ ನೆಗೆಟಿವ್ ಬಂದಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಕಡಬದ ಜನತೆಯಲ್ಲಿದ್ದ ಆತಂಕ ದೂರವಾದಂತಾಗಿದೆ.

42 ವರ್ಷದ ಶಿಕ್ಷಕರೋರ್ವರಿಗೆ ಜೂನ್ 5 ರಂದು ಪಾಸಿಟಿವ್ ಬಂದಿದ್ದು, ಬಳಿಕ ಅವರನ್ನು ಕೋವಿಡ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಇದೀಗ ಎರಡನೆಯ ಬಾರಿ ಮಾಡಿದ ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು ಜೂ.12 ರ ರಾತ್ರಿ ಆಸ್ಪತ್ರೆ ಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Also Read  ಟಯರ್ ಬ್ಲಾಸ್ಟ್ ಆಗಿ ಅಡಿಕೆ ಸಾಗಾಟದ ಟೆಂಪೋ ಪಲ್ಟಿ..! ➤ ಚಾಲಕ ಅಪಾಯದಿಂದ ಪಾರು

ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಹಜವಾಗಿಯೇ ಇಲ್ಲಿಯ ಜನರಲ್ಲಿ ಆತಂಕ ಉಂಟಾಗಿತ್ತು. ಬಳಿಕ ಸುತ್ತಮುತ್ತಲಿನ ಮನೆ, ಸಿಎ ಬ್ಯಾಂಕ್ ಸೀಲ್ ಡೌನ್ ಮಾಡಲಾಗಿತ್ತು. ಅಲ್ಲದೇ ಅವರ ಸಂಪರ್ಕದಲ್ಲಿದ್ದ ಹಲವರಿಗೆ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ಮಾಡಲಾಗಿದ್ದವರ ಗಂಟಲ ದ್ರವ ಪರೀಕ್ಷೆ ಮಾಡಲಾಗಿದೆ. ಇದರ ಫಲಿತಾಂಶ ಇನ್ನಷ್ಟೇ ತಿಳಿದು ಬರಲಿದೆ.

error: Content is protected !!
Scroll to Top