ವೀಡಿಯೋ ವೈರಲ್ ➤ ಸರಕಾರಿ ಕಛೇರಿ ಮುಂದೆ ಮೃತಪಟ್ಟ ವ್ಯಕ್ತಿಯ ಶವ ಕಸದ ವಾಹನಕ್ಕೆ

(ನ್ಯೂಸ್ ಕಡಬ)newskadaba.com ಲಕ್ನೋ. ಜೂ. 12, ಪೌರಕಾರ್ಮಿಕರು ಮೃತದೇಹವನ್ನು ತ್ಯಾಜ್ಯ ಸಾಗಾಟ ವಾಹನಕ್ಕೆ ತುಂಬುತ್ತಿರುವ ಬಗೆಗಿನ 20 ಸೆಕೆಂಡ್‌ಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಈ ಘಟನೆ ಸಂಬಂಧ ಮೂವರು ಪೊಲೀಸರು ಸೇರಿದಂತೆ ಏಳು ಮಂದಿಯನ್ನು ಅಮಾನತುಗೊಳಿಸಿದೆ. ಅಮಾನತುಗೊಂಡ ಇತರ ನಾಲ್ವರು ಮಹಾನಗರ ಪಾಲಿಕೆ ಸಿಬ್ಬಂದಿಗಳಾಗಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ಮುಹಮ್ಮದ್ ಅನ್ವರ್ (45) ಎಂಬ ವ್ಯಕ್ತಿಯ ಮೃತದೇಹವನ್ನು ಪೌರಕಾರ್ಮಿಕರು ಕಸದ ವಾಹನಕ್ಕೆ ಎಸೆಯುತ್ತಿರುವ ವೀಡಿಯೊ ಅರ್ಧ ಗಂಟೆಯಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಲರಾಂಪುರದ ಉತ್ರೂಲಾ ತಹಸೀಲ್ ಗೇಟ್ ಬಳಿ ಈ ಘಟನೆ ನಡೆದಿತ್ತು. ಬಲರಾಂಪುರದ ನಿವಾಸಿಯಾದ ಅನ್ವರ್ ಸರ್ಕಾರಿ ಕಚೇರಿಗೆ ತೆರಳಿದ ವೇಳೆ ಗೇಟ್ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದರು. ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲ.

Also Read   ಬ್ರೆಜಿಲ್ ನಲ್ಲಿ ವಿಮಾನ ಪತನ..!          62 ಮಂದಿ ಸಜೀವ ದಹನ ಭೀಕರ ದೃಶ್ಯ..!                                  

ಕಚೇರಿಯ ಗೇಟ್ ಬದಿಯಲ್ಲೇ ಆ್ಯಂಬುಲೆನ್ಸ್ ವಾಹನ ನಿಲ್ಲಿಸಲಾಗಿತ್ತು. ಆದರೆ ಕೊರೋನ ವೈರಸ್ ಸೋಂಕು ಹರಡುವ ಭೀತಿಯಿಂದ ಶವವನ್ನು ಅದರಲ್ಲಿ ಸಾಗಿಸಲು ನಿರಾಕರಿಸಿದರು ಎಂದು ಹೇಳಲಾಗಿದೆ. ಬಳಿಕ ಪೌರಕಾರ್ಮಿಕರು ಮೃತದೇಹವನ್ನು ಕಸದ ವ್ಯಾನ್‌ಗೆ ಎಸೆಯುತ್ತಿರುವುದನ್ನು ಸ್ಥಳೀಯರು ವೀಡಿಯೊ ಮಾಡಿದ್ದರು.

ವೀಡಿಯೊ ವೈರಲ್ ಆಗುತ್ತಿದ್ದಂತೇ ಜಿಲ್ಲಾಧಿಕಾರಿ ಕೃಷ್ಣ ಕರುಣೇಶ್ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದರು. ಇದು ಅಮಾನವೀಯ. ಕೊರೋನ ಭೀತಿಯಿಂದ ಹಾಗೆ ಮಾಡಿರಬಹುದು. ಆದರೆ ಅದು ಆಗಬಾರದಿತ್ತು. ಪಿಎಸ್‌ಐ ರವೀಂದ್ರ ಕುಮಾರ್ ರಮಣ್, ಪೇದೆಗಳಾದ ಶುಭಂ ಪಾಟೀಲ್ ಮತ್ತು ಶೈಲೇಂದ್ರ ಶರ್ಮಾ ಅವರನ್ನು ತಕ್ಷಣ ಅಮಾನತುಪಡಿಸಲಾಗಿದೆ.

Also Read  ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಜುಲೈ 1ರಂದು ಭೂಮಿ ಪೂಜೆ ಸಾಧ್ಯತೆ

error: Content is protected !!
Scroll to Top