ಬಾರ್ಯ ಗ್ರಾಪಂ ಪಿಡಿಒ ಸಹಿತ ಒಂಬತ್ತು ಮಂದಿಗೆ ದಂಡ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜೂ.12:ಕುಡಿವ ನೀರಿನ ಬಿಲ್‍ನ್ನು ದುರುಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿರುವ ಪ್ರಕರಣಕ್ಕೆ ಸಂಬಂದಪಟ್ಟಂತೆ ಗ್ರಾಪಂ ಪಿಡಿಒ ಸಹಿತ ಒಂಬತ್ತುಮಂದಿಗೆ ದಂಡ ವಿಧಿಸಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಪಂನಲ್ಲಿ ನಡೆದಿದೆ.


ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಪಂನಲ್ಲಿ 2017-2018ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಯಲ್ಲಿ ಗ್ರಾಪಂನಲ್ಲಿ ರಶೀದಿ ಪುಸ್ತಕಗಳ ದುರುಪಯೋಗಪಡಿಸಿಕೊಂಡು ನೀರಿನ ವಸೂಲಿಯಲ್ಲಿ6,92,377 ರೂ ಮತ್ತು 3,99,731 ರೂ. ಸೇರಿದಂತೆ ಒಟ್ಟು 10,92,108 ರೂ ಮೊತ್ತವನ್ನು ಬ್ಯಾಂಕ್‍ನಲ್ಲಿರುವ ಖಾತೆಗೆ ಜಮೆ ಮಾಡದೆ. ನಂತರ ಸಾರ್ವಜನಿಕರ ದೂರು ಬಂದ ಬಳಿಕ ಈ ಮೊತ್ತವನ್ನು 10 ಕಂತುಗಳಲ್ಲಿ ವಸೂಲಿ ಮಾಡಿ ನೀರಿನ ಖಾತೆಗೆ ಜಮೆ ಮಾಡಲಾಗಿತ್ತು.ಆದರೆ ದುರುಪಯೋಗಪಡಿಸಿದ ಮೊಬಲಗಿಗೆ ಶೇ.15ರಷ್ಟು ಬಡ್ಡಿ ಪಾವತಿ ಆಗದೇ ಇದ್ದ ಕಾರಣ ವಸೂಲಿ ಆದ ದಿನಾಂಕದಿಂದ ಬಾಕಿಯಾದ ಮೊಬಲಗಿನ ಮೇಲೆ ಶೇ.15ರಷ್ಟು ಬಡ್ಡಿಯನ್ನು ಸಂಬಂಧಪಟ್ಟ ಅಭಿವೃದ್ದಿ ಅಧಿಕಾರಿ. ಸಿಬ್ಬಂದಿಯಿಂದ ವಸೂಲಿ ಮಾಡಿ ಪಂಚಾಯಿತಿಗೆ ಜಮೆ ಮಾಡಿದ ಬಗ್ಗೆ ಸೂಕ್ತ ದಾಖಲೆಯೊಂದಿಗೆ ವರದಿ ನೀಡುವಂತೆ ಬೆಳ್ತಂಗಡಿ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಗಿತ್ತು.

ಈ ಪ್ರಕರಣವನ್ನು ತನಿಖೆ ನಡೆಸಿರುವ ದ.ಕ. ಜಿಲ್ಲಾ ಪಂಚಾಯಿತಿ ಗ್ರಾಪಂನ ಅಂದಿನ ಪಿಡಿಒ. ಪ್ರಸಕ್ತ ಚೆನ್ನರಾಯಪಟ್ಟಣ ಜುಟ್ಟನಹಳ್ಳಿ ಗ್ರಾಪಂ ಪಿಡಿಒ ಆಗಿರುವ ಎಚ್.ಡಿ.ದೇವರಾಜ್. ಬಾರ್ಯ ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜು. ಗುಮಾಸ್ತೆ ಪ್ರಮೀಳ. ತೆರಿಕೆ ವಸೂಲಿಗ ಸಂಜೀವ. ನಳ್ಳಿ ನೀರಿನ ಕರ ವಸೂಲಿಗ ಮಾಧವ ಮತ್ತು ಗ್ರಾಪಂ ಜವಾನ ಕುಶಾಲಪ್ಪ ಅವರಿಗೆ ನೋಟಿಸ್ ಜಾರಿ ಮಾಡಿ 4,55,861 ರೂ. ಪಾವತಿಸುವಂತೆ ಆದೇಶಿಸಿದೆ.

error: Content is protected !!

Join the Group

Join WhatsApp Group