(ನ್ಯೂಸ್ ಕಡಬ) newskadaba.com.ಹೊಸದಿಲ್ಲಿ,ಜೂ.11:ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾದ ಪರಿಣಾಮ ನಮ್ಮ ದೇಶದಲ್ಲೂ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‍ಗೆ 44 ಪೈಸೆ ಹೆಚ್ಚಳವಾದರೆ, ಡೀಸೆಲ್ ದರ 58 ಪೈಸೆ ಏರಿಕೆ ಕಂಡಿದೆ.
ಈಗಾಗಳೆ ಕೊರೊನಾ ಸಂಕಷ್ಟದಲ್ಲಿರುವ ದೇಶವಾಸಿಗಳಿಗೆ ತೈಲ ದರ ಏರಿಕೆಯಿಂದ ಮತ್ತೆ ಹೊರೆಯಾಗಿದೆ.ಕಳೆದ ಮೂರು ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಬದಲಾಗುತ್ತಲೇ ಇದೆ.ಇದರೊಂದಿಗೆ ಮಾ.14ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ 3 ರೂ, ಅಬಕಾರಿ ಸುಂಕವನ್ನು ಹಾಕಿತ್ತು ಮತ್ತೆ ಮೇ 6ರಂದು ಪೆಟ್ರೋಲ್ ಮೇಲೆ 10ರೂ. ಮತ್ತು ಡೀಸೆಲ್ ಮೇಲೆ 13ರೂ, ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ವಿಧಿಸಿತ್ತು. ಇದು ಗ್ರಾಹಕನ ಜೇಬು ಸುಡುವಂತಾಗಿಸಿದೆ.