ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ ದೆಹಲಿ ಸಿಎಂ ➤ಕೊರೋನಾ ಪರೀಕ್ಷೆಯ ಸಾಧ್ಯತೆ

(ನ್ಯೂಸ್ ಕಡಬ)newskadaba.com ದೆಹಲಿ. ಜೂ.9, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನಾರೋಗ್ಯದಿಂದ ಬಳಲುತ್ತಿದ್ದು, ಕೊರೊನಾವೈರಸ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿದುಬಂದಿದೆ.

ಗಂಟಲು ನೋವು, ಜ್ವರ ಹಾಗೂ ಕೆಮ್ಮುವಿನಿಂದ ಬಳಲುತ್ತಿರುವ ಕಾರಣ ಅರವಿಂದ್ ಕ್ರೇಜಿವಾಲ್ ಸ್ವತಃ ಐಸೋಲೇಶನ್‌ಗೆ ಒಳಗಾಗಿದ್ದು, ಕೋವಿಡ್-19 ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ. ಆನ್‌ಲೈನ್ ಮೂಲಕ ಮಾಧ್ಯಮಗಳಿಗೆ ವಿವರಣೆ ನೀಡಲು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಅನಾರೋಗ್ಯ ಕಾರಣದಿಂದ ತಮ್ಮ ಎಲ್ಲಾ ಸಭೆಗಳನ್ನು ರದ್ದುಗೊಳಿಸಿದ್ದಾರೆ.

error: Content is protected !!
Scroll to Top