(ನ್ಯೂಸ್ ಕಡಬ)newskadaba.com ಜೂ. 8, ಲಾಕ್ ಡೌನ್ ಹಿನ್ನೆಲೆಯಿಂದಾಗಿ ಜೂನ್ 16ರಿಂದ 30 ರವರೆಗೆ ಪದವಿ ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ರಜೆ ಘೋಷಿಸಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಜೊತೆಗೆ ಜೂ.15ರೊಳಗೆ ಆನ್ಲೈನ್ ಕ್ಲಾಸ್ ಗಳ ಮೂಲಕ ಸಿಲೆಬಸ್ ಮುಗಿಸುವಂತೆಯೂ ಸೂಚಿಸಲಾಗಿದೆ. ಕೊರೋನಾ ಲಾಕ್ ಡೌನ್ ನಿಂದಾಗಿ ಕಳೆದೆರಡು ತಿಂಗಳಿಗೂ ಅಧಿಕ ಕಾಲದಿಂದಲೂ ಶಾಲಾ, ಕಾಲೇಜುಗಳು ಬಂದ್ ಆಗಿವೆ, ಆದರೆ ಪದವಿ ತರಗತಿಗಳಿಗೆ ಈ ಹಿಂದೆ ಜೂನ್ 15ರ ಒಳಗೆ ಆನ್ ಲೈನ್ ತರಗತಿಗಳನ್ನು ಪೂರೈಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿತ್ತು. ಇದೀಗ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜೂನ್ 16 ರಿಂದ 30 ರವರೆಗೆ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ರಜೆ ಘೋಷಿಸಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಮುಂದಿನ ಶೈಕ್ಷಣಿಕ ವರ್ಷದ ಕುರಿತು ಕೇಂದ್ರ ಸರ್ಕಾರ ಜುಲೈನಲ್ಲಿ ನಿರ್ಧಾರ ಕೈಗೊಳ್ಳಲಿದ್ದು, ಈ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.