ಆಗಸ್ಟ್ 15ರ ನಂತರ ಶಾಲಾ-ಕಾಲೇಜುಗಳ ಪುನರಾರಂಭ ➤ ಕೇಂದ್ರ ಸಚಿವ

(ನ್ಯೂಸ್ ಕಡಬ)newskadaba.com ಜೂ.8, ಕೊರೋನಾದಿಂದ ದೇಶದೆಲ್ಲೆಡೆ ಲಾಕ್ ಡೌನ್ ಆಗಿ ಮುಚ್ಚಲ್ಪಟ್ಟಿದ್ದ ಶಾಲಾ – ಕಾಲೇಜುಗಳನ್ನು ಆಗಸ್ಟ್ 15ರ ನಂತರ ಆರಂಭಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಮಹತ್ವದ ಆದೇಶವನ್ನು ನೀಡಿದ್ದಾರೆ.

ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಇವರು 3 ತಿಂಗಳುಗಳಿಂದ ಮುಚ್ಚಲ್ಪಟ್ಟ ಶಾಲಾ ಕಾಲೇಜುಗಳನ್ನು ಆಗಸ್ಟ್‌ ತಿಂಗಳಿನಲ್ಲಿ ಮರು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಹಾಗೆಯೇ ಮುಂದೂಡಲ್ಪಟ್ಟ ಎಲ್ಲಾ ಪರೀಕ್ಷೆಗಳನ್ನು ಮುಂದಿನ ತಿಂಗಳು ನಡೆಸಲಾಗುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಜೆಇಇ ಹಾಗೂ ಇನ್ನುಳಿದ ಪರೀಕ್ಷೆಗಳನ್ನು ಕೂಡಾ ಜುಲೈ ತಿಂಗಳಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Also Read  ಉಪ್ಪಳ: ಕರ್ನಾಟಕ ನೋಂದಣಿಯ ಕಾರಿನಲ್ಲಿ 19 ರ ಹರೆಯದ ಯುವತಿಯ ಅಪಹರಣ ➤ ಆಕ್ರೋಶದಿಂದ ಕಾರನ್ನು ಅಡ್ಡಗಟ್ಟಿ ಧ್ವಂಸಗೈದು ಯುವತಿಯನ್ನು ರಕ್ಷಿಸಿದ ಊರವರು ➤ ಪೊಲೀಸರಿಂದ ಲಾಠಿ ಚಾರ್ಜ್ - ಉಪ್ಪಳ ಉದ್ವಿಗ್ನ

Comments are closed.

error: Content is protected !!
Scroll to Top