(ನ್ಯೂಸ್ ಕಡಬ)newskadaba.com ಶ್ರೀನಗರ: ಜೂ. 7, ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ರಕ್ಷಣಾಪಡೆಯು ಜಂಟಿ ಕಾರ್ಯಾಚರಣೆ ಆರಂಭಿಸಿದ ವೇಳೆ ಉಗ್ರರು ದಾಳಿ ಆರಂಭಿಸಿದ ಕಾರಣ ಅಲ್ಲಿ ಗುಂಡಿನ ಚಕಮಕಿ ನಡೆದಿದೆ.
ಅಲ್ಲಿನ ಪ್ರಾಥಮಿಕ ವರದಿಯ ಪ್ರಕಾರ ಕನಿಷ್ಠ ಮೂವರು ಉಗ್ರರು ರಕ್ಷಣಾ ಪಡೆಯ ಕಾರ್ಯಾಚರಣೆ ವೇಳೆ ಸಿಲುಕಿದ್ದಾರೆ. ರಕ್ಷಣಾ ಪಡೆಗಳ ಬಳಿ ಸಿಲುಕಿದ್ದ ಉಗ್ರರು ಪರಾರಿಯಾಗಲು ಬೇಕಾಗಿ ಗುಂಡಿನ ದಾಳಿ ನಡೆಸಿದ್ದರಿಂದ ರಕ್ಷಣಾ ಪಡೆಯು ಪ್ರತಿದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್ ನ 178ನೇ ಬೆಟಾಲಿಯನ್, ಜೈನಾಪುರದ ರಾಷ್ಟ್ರೀಯ ರೈಫಲ್ಸ್ ಆಂಡ್ ಸ್ಪೆಷಲ್ ಆಪರೇಶನ್ ಗ್ರೂಪ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂದು ಮೂಲಗಳು ತಿಳಿಸಿವೆ.