ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಮೂರನೇ ಸುತ್ತಿನ ಅರ್ಜಿ

(ನ್ಯೂಸ್ ಕಡಬ)newskadaba.com ಕುದ್ಲೂರು. ಜೂ. 7, ಕುದ್ಲೂರು ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್ ತೀರಾ ಸಿಗುತ್ತಿಲ್ಲ. ದೈನಂದಿನ ಸಂಪರ್ಕ ಹಾಗೂ ಅಂತರ್ಜಾಲ ವಿನಿಯೋಗಕ್ಕೆ ನೆಟ್ ವರ್ಕ್ ಇಲ್ಲದೇ ಇರುವುದರಿಂದ ಬಹಳ ಕಷ್ಟವಾಗುತ್ತಿದೆ.

ಇದೀಗ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಮಕ್ಕಳ ವಿಧ್ಯಾಭ್ಯಾಸ ಕೂಡಾ ಆನ್ ಲೈನ್, ಇಂಟರ್ ನೆಟ್ ಮೊರೆಹೋಗಿರುವುದರಿಂದ ಮಕ್ಕಳ ವಿಧ್ಯಾಭ್ಯಾಸಕ್ಕೆ ಕೂಡಾ ಚ್ಯುತಿ ಬರುತ್ತಿದೆ. ಮಕ್ಕಳು ಮನೆಯ ಹಂಚು, ಗುಡ್ಡೆಯನ್ನು ಹತ್ತಿ ನೆಟ್ ವರ್ಕಿಗಾಗಿ ಪರದಾಡುತ್ತಿದ್ದಾರೆ. ನಮ್ಮೂರಿಗೆ ಸಮರ್ಪಕವಾಗಿ ನೆಟ್ ವರ್ಕ್ ಸಿಗುವಂತೆ ಟವರ್ ಒಂದನ್ನು ಅಳವಡಿಸಿಕೊಡಬೇಕಾಗಿ ಎರಡು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರ ದ ಶಾಸಕರಾದ ಎಸ್. ಅಂಗಾರ ಅವರಿಗೆ ಬೇಡಿಕೆಯನ್ನು ಇಟ್ಟಿದ್ದೆವು. ಇದರಿಂದ ಇನ್ನೂ ಪ್ರಯೋಜನವಾಗದ ನಮ್ಮ ಅಹವಾಲನ್ನು ಮತ್ತೇ ಶಾಸಕರ ಸಮಕ್ಷಮಕ್ಕೆ ಇಡಲಾಯಿತು. ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯ ತಿಮ್ಮಪ್ಪ ಗೌಡ, ಎಂ.ಎಂ. ಮಹ್ ರೂಫ್ ಆತೂರು, ಸಿರಾಜ್, ಇಲ್ಯಾಸ್, ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು.

Also Read  ಮಂಗಳೂರು: ಇನ್ಸ್ಟಾಗ್ರಾಂ ಮೂಲಕ ಪಾರ್ಟ್ ಟೈಂ ಉದ್ಯೋಗದ ಹೆಸರಲ್ಲಿ ವಂಚನೆ ➤ ದೂರು ದಾಖಲು

error: Content is protected !!
Scroll to Top