ಮೂಡಬಿದಿರೆ: ಇನ್ನೂ ಮುಕ್ತಿ ಕಾಣದ ಸೀರೆ ಸುತ್ತಿದ ಸ್ನಾನಗೃಹಗಳು

(ನ್ಯೂಸ್ ಕಡಬ)newskadaba.com ಮೂಡುಬಿದಿರೆ. ಜೂ. 7, ಸ್ವಚ್ಛತೆ ಹಾಗೂ ಬಯಲು ಶೌಚಮುಕ್ತ ಸಮಾಜಕ್ಕಾಗಿ ಸಾಕಷ್ಟು ಪ್ರಯತ್ನ ನಡೆದಿದ್ದರೂ ಮೂಡುಬಿದಿರೆಯ ವಿವಿಧೆಡೆ ಸಮರ್ಪಕ ಫ‌ಲ ಕೊಟ್ಟಿಲ್ಲ. ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ಹಲವೆಡೆ ಸುಮಾರು 40ಕ್ಕಿಂತಲೂ ಅಧಿಕ ಮನೆಗಳಲ್ಲಿ ಶೌಚಾಲಯಗಳಿಲ್ಲ. ಇಲ್ಲೆಲ್ಲ ಬಯಲು ಶೌಚ ಇನ್ನೂ ಚಾಲ್ತಿಯಲ್ಲಿದೆ.

 

ಹಲವೆಡೆ ಅನಧಿಕೃತ ಮನೆಗಳಿದ್ದರೂ ಅವುಗಳನ್ನು ಡೀಮ್ಡ್ ಫಾರೆಸ್ಟ್‌ ಕಾಟ ಕಾಡುತ್ತಿದೆ. ಪ್ಲಾಸ್ಟಿಕ್‌ ಶೀಟ್‌ ಹೊದೆಸಿದ ಮನೆಗಳೂ ಇವೆ. ಇಂಥ ಮನೆಗಳ ಪಕ್ಕದಲ್ಲಿ ನಾಲ್ಕು ಕಂಬ ಹಾಕಿ ಅದಕ್ಕೆ ಸೀರೆಗಳನ್ನು ಸುತ್ತಿ ಬಚ್ಚಲು ಮನೆಯಾಗಿಸಿ ಸ್ನಾನ ಮಾಡುವ ಸ್ಥಿತಿಯಿದೆ. ಪುರಸಭೆ ಹಾಗೂ ಗ್ರಾ.ಪಂ. ವ್ಯಾಪ್ತಿಯ ಅನೇಕ ಕಡೆಗಳಲ್ಲಿರುವ ಸೂಕ್ತ ದಾಖಲೆಗಳಿಲ್ಲದ ಮನೆಗಳಿಗೆ ಶೌಚಾಲಯ ಒದಗಿಸಲು ಸ್ಥಳೀಯ ಆಡಳಿತಗಳಿಗೆ ತೊಡಕಾಗುತ್ತಿದೆ.

Also Read  ಮಂಗಳೂರು: ಪತ್ನಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಭೀತಿ ➤ ವಿಷವುಣಿಸಿ ಹೆಂಡತಿ ಮಕ್ಕಳನ್ನು ಕೊಂದ ಪತಿ..!

error: Content is protected !!
Scroll to Top