ಈ ದಿನದ ರಾಶಿಫಲ ಪ್ರಧಾನ ತಾಂತ್ರಿಕ್ ಗಿರಿಧರ್ ಭಟ್ ರವರಿಂದ

ಶ್ರೀ ನಾರಸಿಂಹ ಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಕೌಟುಂಬಿಕ ಕಲಹ, ಇನ್ನು ಇತ್ಯಾದಿ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಮೇಷ ರಾಶಿ
ನಿಮ್ಮ ಲಕ್ಷಣವು ತುಂಬಾ ಆಕರ್ಷಿತವಾಗಿ ಇಂದು ಕಾಣಬಹುದು. ಪ್ರವಾಸ ಮನರಂಜನೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತೀರಿ ಹಾಗೂ ನಿಮ್ಮ ದೊಡ್ಡಸ್ಥಿಕೆಯಿಂದ ದುಂದುವೆಚ್ಚ ಮಾಡಬಹುದಾದ ಸಾಧ್ಯತೆ ಇದೆ. ಕುಟುಂಬಸ್ಥರ ಜೊತೆ ಹಾಗೂ ಕೆಲವು ವ್ಯಕ್ತಿಗಳ ಜೊತೆಗೂ ಸಹ ಒರಟುತನದ ವರ್ತನೆ ನಿಮಗೆ ಒಳ್ಳೆಯದಲ್ಲ. ನಿಮ್ಮ ಮನಸ್ಸಿನಲ್ಲಿ ತುಂಬಾ ಸುಂದರವಾದ ಕಲ್ಪನೆಗಳಿವೆ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿ.

ವೃಷಭ ರಾಶಿ
ಸ್ನೇಹಿತ ವರ್ಗದಲ್ಲಿ ಕೆಲವರು ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುತ್ತಿರಬಹುದು ಆದಕಾರಣ ನೀವು ಜಾಗೃತೆ ವಹಿಸುವುದು ಸೂಕ್ತ. ನಿರೀಕ್ಷಿತ ಕೆಲಸಗಳು ಮುಂದೂಡಲ್ಪಡುವ ಸಾಧ್ಯತೆ ಇದೆ. ಪತ್ನಿಯ ಪ್ರೇಮ ಅಲಕ್ಷಿಸುವುದು ಉತ್ತಮವಲ್ಲ.

ಮಿಥುನ ರಾಶಿ
ನಿಮ್ಮ ಕೆಲಸಗಳಿಂದ ಉತ್ತಮ ಅಭಿಪ್ರಾಯವನ್ನು ಪಡೆಯುವ ಸಾಧ್ಯತೆ. ಹೊಸ ಹಣಕಾಸಿನ ಒಪ್ಪಂದ ಅದ್ಭುತವಾಗಿ ಅಡೆತಡೆಯಿಲ್ಲದೆ ನೆರವೇರುವುದು. ಕೆಲವು ಮೂಲಗಳಿಂದ ಹಣಕಾಸಿನ ಸ್ಥಿತಿ ಉತ್ತಮಗೊಳ್ಳುತ್ತ ಸಾಗುತ್ತದೆ. ನಿಮ್ಮ ಉದ್ಯೋಗ ಅಥವಾ ಮನೆಯ ಸ್ಥಳ ಬದಲಾವಣೆ ಚಿಂತನೆ ಸಾಕಾರಗೊಳ್ಳುವ ಹಂತದಲ್ಲಿರುತ್ತದೆ. ನಿಮ್ಮ ಮಾತು ನೇರವಾಗಿ ಹಾಗೂ ನೈಜತೆಯಿಂದ ಇರಲಿ ಏಕೆಂದರೆ ವ್ಯವಹಾರದಲ್ಲಿ ಇವನ್ನೆಲ್ಲಾ ಇಂದು ಗಮನಿಸುತ್ತಿರುತ್ತಾರೆ.

ಕರ್ಕಾಟಕ ರಾಶಿ
ಕುಟುಂಬದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಪತ್ನಿಯ ಬಾಳಿನ ಆಶಾಕಿರಣ ನೀವೇ, ಇಂದು ಅವರ ಸಾಂಗತ್ಯದಲ್ಲಿ ಸಂತೋಷದ ಪರಾಕಾಷ್ಠೆಯಲ್ಲಿ ಕಳೆದುಹೋಗುವಿರಿ. ಮನಸ್ಸು ಮರ್ಕಟ ಇದ್ದಂತೆ, ಹೆಚ್ಚು ವಿಚಾರಗಳಿಗೆ ಚಿಂತನೆ ಮಾಡುತ್ತಾ ಅಥವಾ ಬೇರೆಯವರ ವಿಷಯಗಳಲ್ಲಿ ಯೋಚಿಸುವುದು ಅಷ್ಟೊಂದು ಸರಿ ಕಾಣುವುದಿಲ್ಲ. ಆರೋಗ್ಯದಲ್ಲಿ ಗಮನವಹಿಸುವುದು ಒಳ್ಳೆಯದು.

Also Read  ಬಿಟ್ಟು ಹೋಗಿರುವ ಸಂಗಾತಿ ಮರಳಿ ಬರುವ ತಂತ್ರ

ಸಿಂಹ ರಾಶಿ
ಅನಿರೀಕ್ಷಿತವಾಗಿ ಉದ್ಯೋಗ ಸ್ಥಳದಲ್ಲಿ ಸಮಸ್ಯೆ ಕಾಣಬಹುದು ಅದನ್ನು ಪರಿಹರಿಸಲು ನಿಮ್ಮ ವಿವೇಚನೆಯನ್ನು ಉಪಯೋಗಿಸಿ. ಜಮೀನು ಅಥವಾ ಗೃಹ ಖರೀದಿಗೆ ಉತ್ತಮವಾದ ದಿನವಿದು. ಕುಟುಂಬದ ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸಿ ಆಡಿಕೊಳ್ಳುವ ಹಾಗೆ ಮಾಡಬೇಡಿ. ಕೆಲಸದ ನಿರ್ಧಾರಗಳು ಉತ್ತಮ ಲಾಭಾಂಶ ತಂದುಕೊಡುತ್ತದೆ. ಇಂದು ನೀವು ವ್ಯವಹಾರದ ಕೆಲವು ಸೂಕ್ಷ್ಮ ವಿಚಾರಗಳನ್ನು ಕಲಿಯುತ್ತೀರಿ.

ಕನ್ಯಾ ರಾಶಿ
ನಿಮ್ಮಲ್ಲಿ ಮೂಡುವ ಸಾತ್ವಿಕ ಯೋಚನೆಗಳು ನಿಮ್ಮ ಗುರಿ ನೆರವೇರಲು ಸಹಕಾರ ನೀಡುತ್ತದೆ. ಇಂದು ಮನೆ ದೇವರ ಆಶೀರ್ವಾದ ಪಡೆಯಲು ಬಯಸುತ್ತೀರಿ. ಕುಟುಂಬದಲ್ಲಿ ನಿಮ್ಮ ಬಗ್ಗೆ ಕೆಲವು ಊಹಾಪೋಹ ಮಾತುಗಳು ಬರುವ ಸಾಧ್ಯತೆ ಇದೆ. ನಿಮ್ಮ ಕೆಲವು ನಿರೀಕ್ಷಿತ ಕೆಲಸಗಳು ವಿಳಂಬ ಆಗಲಿದೆ. ಮನೆಯಲ್ಲಿ ಆರೋಗ್ಯದ ಸಮಸ್ಯೆ ನಿಮ್ಮನ್ನು ಹೆಚ್ಚು ಕಾಡಬಹುದು. ನಿಮ್ಮ ಕೆಲಸದಲ್ಲಿ ಸ್ಥಳ ಬದಲಾವಣೆಯಾಗುವ ನಿರೀಕ್ಷೆ ಇದೆ.

ತುಲಾ ರಾಶಿ
ಮಾತುಗಳು ಮತ್ತು ವ್ಯವಹಾರದ ಶೈಲಿಯು ನೇರವಾಗಿರಲಿ. ನಿಮ್ಮಲ್ಲಿ ಮೂಡಿರುವ ಸೋಮಾರಿತನವನ್ನು ಆದಷ್ಟು ತ್ಯಜಿಸುವುದು ಸೂಕ್ತ. ಸಂಗಾತಿ ಮತ್ತು ಕುಟುಂಬದವರು ನಿಮಗೆ ಉತ್ಸಾಹ ತರಲಿದ್ದಾರೆ. ನಿರ್ದಿಷ್ಟ ಗುರಿಯನ್ನು ತಲುಪಲು ನಿಮ್ಮ ಪರಿಶ್ರಮ ಇನ್ನಷ್ಟು ಬೇಕಾಗಿದೆ. ದೈವ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡು ಬರಲಿದೆ.

ವೃಶ್ಚಿಕ ರಾಶಿ
ಇಂದು ಸಮಾರಂಭಗಳಿಗೆ ಅಥವಾ ಗೋಷ್ಠಿಗಳಿಗೆ ನೀವು ಪಾಲ್ಗೊಳ್ಳಲು ಸಿದ್ದರಾಗುವಿರಿ. ಮಧ್ಯಮ ಗತಿಯ ಆರ್ಥಿಕ ವ್ಯವಹಾರ ನಡೆಯಲಿದೆ. ನೆನೆಗುದಿಗೆ ಬಿದ್ದಿರುವ ಕಾರ್ಯಗಳು ಈ ದಿನ ಒಂದು ಹಂತದಲ್ಲಿ ಪುನರಾರಂಭ ಮಾಡುವ ಸಾಧ್ಯತೆಗಳು ದಟ್ಟವಾಗಿದೆ.

Also Read  ಚಳಿಗಾಲದಲ್ಲಿ ಅಬ್ಬರಿಸುವ ಅಸ್ತಮಾ ಖಾಯಿಲೆ✍? ಡಾ| ಮುರಲೀ ಮೋಹನ್ ಚೂಂತಾರು

ಧನಸ್ಸು ರಾಶಿ
ಇಬ್ಬರ ಜಗಳದಲ್ಲಿ ನೀವು ಮೂರನೇ ವ್ಯಕ್ತಿಯಾಗಿ ಪ್ರವೇಶಿಸ ಬೇಡಿ ತಟಸ್ಥವಾಗಿರುವುದು ಕ್ಷೇಮ. ಸ್ವಂತ ಉದ್ಯೋಗದ ಯೋಜನೆ ಸಕಾರಾತ್ಮಕ ಗೊಳ್ಳುವ ಸುಸಂದರ್ಭ ಒದಗಿಬಂದಿದೆ. ಮಕ್ಕಳೊಡನೆ ಚುಟುಕು ಪ್ರವಾಸ ಅಥವಾ ಪ್ರದರ್ಶನ ಕಲೆಗಳಿಗೆ ಭೇಟಿ ನೀಡುವ ಸಾಧ್ಯತೆ ಈ ದಿನ ಕಂಡುಬರುತ್ತದೆ.

ಮಕರ ರಾಶಿ
ಮನೆಗೆ ನೆಂಟರಿಷ್ಟರ ಆಗಮನದಿಂದ ಸಂತಸ ಹೆಚ್ಚಾಗಲಿದೆ. ಈ ದಿನ ನಿಮ್ಮ ಶ್ರಮ ತುಂಬಾ ಹೆಚ್ಚಾಗಿ ಕಾಣಬಹುದು. ಹೆಚ್ಚಿನ ಓಡಾಟ ಅಲೆದಾಟದಿಂದ ದೈಹಿಕ ಆಯಾಸ ದಂತಹ ಸಮಸ್ಯೆಯಲ್ಲಿ ಸಿಲುಕುವಿರಿ. ಕೆಲವು ಯಶಸ್ಸುಗಳು ಇನ್ನೇನು ಹತ್ತಿರದಲ್ಲಿದ್ದ ಹಾಗೆ ಅವುಗಳು ಕಣ್ಮರೆಯಾಗುವ ಸಾಧ್ಯತೆಗಳು ಕಂಡು ಬರುತ್ತದೆ.

ಕುಂಭ ರಾಶಿ
ತೀವ್ರತರನಾದ ನಿರಾಶಾ ಭಾವನೆ ಕಾಡಬಹುದು ನೀವು ಆದಷ್ಟು ಸಕಾರಾತ್ಮಕವಾಗಿ ಚಿಂತಿಸಿ ನಿಮ್ಮ ಪರಿಶ್ರಮಕ್ಕೆ ಖಂಡಿತ ಬೆಲೆ ಸಿಗಲಿದೆ. ಕುಲ ದೇವತಾರಾಧನೆ ಮಾಡುವುದು ಒಳಿತು. ಹೊಸತನದತ್ತ ನಿಮ್ಮ ಪ್ರಯಾಣ ಸಾಗಲಿದೆ.

ಮೀನ ರಾಶಿ
ಹೊಸ ವ್ಯಕ್ತಿಗಳ ಪರಿಚಯ ಹಾಗೂ ಮಿತ್ರರು ನಿಮ್ಮ ಜೀವನದಲ್ಲಿ ಸೇರ್ಪಡೆಯಾಗಲಿದ್ದಾರೆ. ಉದ್ಯಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಆಧುನಿಕತೆ ಮತ್ತು ತಂತ್ರಜ್ಞಾನವನ್ನು ನೀವು ಪ್ರಸ್ತುತಪಡಿಸಲು ಬಯಸುವಿರಿ. ನಿಮ್ಮ ಕೆಲವು ನಿಲುವುಗಳನ್ನು ಮೇಲಾಧಿಕಾರಿಗಳು ಯಾವುದೇ ಬೆಲೆ ನೀಡದೆ ತಳ್ಳಿಹಾಕಬಹುದು.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಲಭ್ಯರಿದ್ದಾರೆ. ಪರಿಹಾರ ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top