ಅಧಿಕಾರಿಗೆ ಚಪ್ಪಲಿಯೇಟು ತಿನ್ನಿಸಿದ ಬಿಜೆಪಿ ನಾಯಕಿ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ. ಜೂ. 6, ಬಿಜೆಪಿ ನಾಯಕಿ ಸೊನಾಲಿ ಫೋಗಟ್ ರವರು ಅಧಿಕಾರಿಯೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶುಕ್ರವಾರ ಅವರು ರೈತರ ಮಾರುಕಟ್ಟೆಗೆ ಭೇಟಿ ನೀಡಿದ್ದು, ರೈತರು ನೀಡಿದ್ದ ದೂರಿನಂತೆ ಇಲ್ಲಿನ ಸಮಿತಿಯ ಸದಸ್ಯ ಸುಲ್ತಾನ್ ಸಿಂಗ್ ಬಳಿ ಮಾತನಾಡಲು ಹೋಗಿದ್ದರು. ಈ ಸಂದರ್ಭ ಆತ ಆಕೆಯನ್ನು ನಿಂದಿಸಿದ್ದ ಎಂದು ಆರೋಪಿಸಲಾಗಿದೆ.

ಈ ಸಂದರ್ಭ ಕೋಪಗೊಂಡ ಆಕೆ ಅಧಿಕಾರಿಗೆ ಚಪ್ಪಲಿಯಲ್ಲಿ ಥಳಿಸಿದ್ದಾರೆ. ಆಕೆ ಥಳಿಸುತ್ತಿರುವಂತೆ ಆ ವ್ಯಕ್ತಿ ಬಿಟ್ಟು ಬಿಡುವಂತೆ ಕೇಳಿಕೊಳ್ಳುವುದು ಮತ್ತು ದೂರುಗಳನ್ನು ಆಲಿಸುವುದಾಗಿ ಹೇಳುವುದು ಕೇಳಿಸುತ್ತದೆ. ನಂತರ ಸೊನಾಲಿ ಫೋಗಟ್ ಪೊಲೀಸರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

Also Read  ಧಾರಾಕಾರ ಮಳೆ ➤ನಾಲ್ವರು ಮೃತ್ಯು

error: Content is protected !!
Scroll to Top