(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 5, ರಾಜ್ಯದಲ್ಲಿ ಬಸ್, ಕ್ಯಾಬ್ ಹಾಗೂ ಅಟೋಗಳು ರಾತ್ರಿ ವೇಳೆಯಲ್ಲಿ ಸಂಚರಿಸಲು ಸರಕಾರವು ರಾತ್ರಿಯಿಂದ ಕರ್ಫ್ಯೂ ಸಡಿಲಿಕೆ ಮಾಡಿದೆ. ಕೊರೋನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ವೇಳೆ ರಾತ್ರಿಯ ಕರ್ಫ್ಯೂ ನಿರ್ಬಂಧವನ್ನು ಸಡಿಲಿಕೆ ಮಾಡಿ ರಾಜ್ಯ ಸರಕಾರ ಗುರುವಾರ ಈ ಆದೇಶ ಹೊರಡಿಸಿದೆ.
ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಬಸ್ ಹಾಗೂ ಟ್ಯಾಕ್ಸಿಗಳಲ್ಲಿ ಕಂಟೈನ್ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆ ಸಂಚರಿಸಬಹುದು. ಪ್ರಯಾಣಿಕರು ಹೊಂದಿರುವಂತಹ ಬಸ್ ಟಿಕೆಟ್ ಆಧಾರದ ಮೇಲೆ ಬಸ್ ನಿಲ್ದಾಣಗಳಿಗೆ ಹೋಗಲು ಮತ್ತು ಬಸ್ ನಿಲ್ದಾಣದಿಂದ ಮನೆಗಳಿಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಗುರುವಾರ ಹೊರಡಿಸಲಾದ ಆದೇಶದಲ್ಲಿ ಕರ್ಫ್ಯೂ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ತೆರವುಗೊಳಿಸಿದ್ದಾರೆ.